ಕೋಲ್ಕತ್ತಾ: ಅಸೂಯೆ ಅಥವಾ ಸಂಪೂರ್ಣ ಕೀಳರಿಮೆ ಸಂಕೀರ್ಣತೆಯ ಆಘಾತಕಾರಿ ಪ್ರಕರಣದಲ್ಲಿ, ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ ಪತ್ನಿ ರಾಜ್ಯ ಸರ್ಕಾರದ ಶುಶ್ರೂಷಕ ಕೆಲಸಕ್ಕೆ ಸೇರದಂತೆ ತಡೆಯೊಡ್ಡಲು ಸೋಮವಾರ ತನ್ನ ಪತ್ನಿಯ ಕೈಯನ್ನು ಕತ್ತರಿಸಿದ ಘಟನೆ ವರದಿಯಾಗಿದೆ.
ಕೈ ಕಡಿದ ಪತಿಯನ್ನು ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತುಗ್ರಾಮ್ ನಿವಾಸಿ ಶೇರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಮತ್ತು ಪತ್ನಿ ರೇಣು ಖಾತುನ್ ಎಂದು ಗುರುತಿಸಲಾಗಿದೆ. ಅತ್ಯಂತ ಅಮಾನುಷದ ಸಂಗತಿಯೆಂದರೆ, ಸೋಮವಾರ ಬೆಳಿಗ್ಗೆ ಆತ ತನ್ನ ಕ್ರೂರ ದಾಳಿಯ ನಂತರ ತನ್ನ ಹೆಂಡತಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗಿದ್ದಾನೆ, ಆದರೆ ವೈದ್ಯರು ಕೈಯ ತುಂಡಾದ ಭಾಗವನ್ನು ಮರುಜೋಡಿಸಲು ಸಾಧ್ಯವಾಗಬಾರದೆಂದು ಕತ್ತರಿಸಿದ ಭಾಗವನ್ನು ತನ್ನ ನಿವಾಸದಲ್ಲಿ ಅಡಗಿಸಿಟ್ಟು ಬಂದಿದ್ದ ಎಂದು ಹೇಳಲಾಗಿದೆ.
ತನ್ನ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ಶೇರ್ ಮೊಹಮ್ಮದ್ ತಲೆಮರೆಸಿಕೊಂಡಿದ್ದಾನೆ ಮತ್ತು ಸ್ವಲ್ಪ ಸಮಯದ ನಂತರ, ಆತನ ಕುಟುಂಬ ಸದಸ್ಯರು ಕೂಡ ತಲೆಮರೆಸಿಕೊಂಡಿದ್ದಾರೆ.
ರೇಣು ಖಾತುನ್ ನರ್ಸಿಂಗ್ ತರಬೇತಿ ಪಡೆಯುತ್ತಿದ್ದು, ಸಮೀಪದ ದುರ್ಗಾಪುರದ ಕೈಗಾರಿಕಾ ಟೌನ್‌ಶಿಪ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಆಕೆಗೆ ರಾಜ್ಯ ಸರ್ಕಾರದಲ್ಲಿ ನರ್ಸ್ ಆಗಿ ನೇಮಕಾತಿ ಆಗಿತ್ತು ಹಾಗೂ ಇದು ಪತಿಯನ್ನು ಕೆರಳಿಸಿತ್ತು.
ಶೇರ್ ಮೊಹಮ್ಮದ್ ಸ್ವತಃ ನಿರುದ್ಯೋಗಿಯಾಗಿರುವುದರಿಂದ ಸರ್ಕಾರಿ ನೌಕರಿ ಸಿಕ್ಕ ನಂತರ ಪತ್ನಿ ತನ್ನನ್ನು ಬಿಟ್ಟು ಹೋಗುತ್ತಾಳೆ ಭಯದಲ್ಲಿ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಶೇರ್ ಮೊಹಮ್ಮದ್ ನೀನು ಕೆಲಸಕ್ಕೆ ಸೇರಬೇಡ ಎಂದು ಪತ್ನಿಗೆ ತಾಕೀತು ಮಾಡಿದ್ದ, ಆದರೆ ಪತ್ನಿ ಖಾತುನ್ ಒಪ್ಪಲಿಲ್ಲ. ಇದರಿಂದ ಕೆರಳಿದ ಆತ ಅಂತಿಮವಾಗಿ, ಸೋಮವಾರ ಆಕೆ ಕೆಲಸಕ್ಕೆ ಹೋಗದಂತೆ ತಡೆಯಲು ಕೈ ಕಡಿದಿದ್ದಾನೆ.
ತನ್ನ ಸಹೋದರಿಗೆ ರಾಜ್ಯ ಸರ್ಕಾರದ ನೇಮಕಾತಿ ಪತ್ರ ಸಿಕ್ಕಾಗಿನಿಂದ ಶೇರ್ ಮೊಹಮ್ಮದ್ ಆ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಅವಳಿಗೆ ಒತ್ತಾಯಿಸುತ್ತಿದ್ದ ಎಂದು ಆಕೆಯ ಹಿರಿಯ ಸಹೋದರ ರಿಪೋನ್ ಶೇಖ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದಾಗ್ಯೂ, ನನ್ನ ಸಹೋದರಿ ಯಾವಾಗಲೂ ಶುಶ್ರೂಷಾ ವೃತ್ತಿಯನ್ನು ಮುಂದುವರಿಸುವ ಕನಸು ಕಾಣುತ್ತಿದ್ದಳು ಮತ್ತು ಅವಳು ನಿರಾಕರಿಸಿದಳು. ಶೇರ್ ಮೊಹಮ್ಮದ್‌ನ ಅಭದ್ರತೆಯ ಭಾವನೆಯು ಇಂಥ ದುರಂತಕ್ಕೆ ಕಾರಣವಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ಹಿರಿಯ ಸಹೋದರ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ