ಕರ್ನಾಟಕದಲ್ಲಿ ಕೊರೊನಾ ಸೋಂಕು ಏರಿಕೆ: 376 ಹೊಸ ಸೋಂಕು ದಾಖಲು

ಬೆಂಗಳೂರು: ರಾಜ್ಯದಲ್ಲಿಕೊರೊನಾ ದೈನಂದಿನ ಪ್ರಕರಣ ಏರಿಕೆ ಆಗುತ್ತಿದೆ. ಇಂದು, ಬುಧವಾರ ರಾಜ್ಯದಲ್ಲಿ 376 ಕೊರೊನಾ ಸೋಂಕು ದಾಖಲಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ.
ಿದೇ ಸಮಯದಲ್ಲಿ ರಾಜ್ಯದಲ್ಲಿ 231 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ.1.64 ದಾಖಲಾಗಿದ್ದು, ರಾಜ್ಯದಲ್ಲಿ ಈ ವಾರ ಸೋಂಕಿನಿಂದ ಮೃತಪಟ್ಟವರ ದರ ಶೇ.0.04 ಇದೆ.

ರಾಜ್ಯದಲ್ಲಿ ಬುಧವಾರ ಒಟ್ಟು 23,246 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 2,70,312 ಮಂದಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ -358, ಬೆಂಗಳೂರು ಗ್ರಾಮಾಂತರ -03, ದಕ್ಷಿಣ ಕನ್ನಡ -01, ಧಾರವಾಡ -04, ಹಾವೇರಿ -02, ಮೈಸೂರು -07 ಮತ್ತು ಉಡುಪಿ -01 ಕೊರೊನಾ ಪ್ರಕರಣಗಳು ದಾಖಲಾಗಿವೆ. ಯಾವುದೇ ಕೋವಿಡ್‌ ಸಾವು ವರದಿಯಾಗಿಲ್ಲ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement