ಈವ್ ಟೀಸಿಂಗ್ ವಿರೋಧಿಸಿದ ಭೋಪಾಲ್ ಮಹಿಳೆ ಮುಖಕ್ಕೆ ಬ್ಲೇಡ್ ನಿಂದ ಹಲ್ಲೆ; ಮುಖಕ್ಕೆ ಬೇಕಾಯ್ತು 118 ಹೊಲಿಗೆಗಳು…!

ಭೋಪಾಲ್: ಈವ್ ಟೀಸಿಂಗ್ ಯತ್ನವನ್ನು ವಿರೋಧಿಸಿದ ಮಹಿಳೆಯೊಬ್ಬರ ಮೇಲೆ ಕೆಲ ಯುವಕರು ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾರೆ. 32 ವರ್ಷದ ಮಹಿಳೆಯನ್ನು ಮೂವರು ಅಪರಿಚಿತ ಯುವಕರು ಅಡ್ಡಗಟ್ಟಿದರು ಮತ್ತು ಅವರಲ್ಲಿ ಒಬ್ಬ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಮುಖಕ್ಕೆ 118 ಹೊಲಿಗೆಗಳನ್ನು ಹಾಕಿದ್ದಾರೆ ಎಂದು ಟಿಟಿ ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ. ಭೋಪಾಲ್ ನಗರದ ಟಿಟಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ಒಂದು ಕಣ್ಣು ತೆರೆಯಲು ಹಾಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಜೂನ್ 12 ರಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಭೂಪಾಲ್ ಉಪ ಪೊಲೀಸ್ ಆಯುಕ್ತ ಸಾಯಿ ಕೃಷ್ಣ ಎಸ್ ತೋಟಾ, ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಶ್ರೀ ಪ್ಯಾಲೇಸ್ ಹೋಟೆಲ್‌ಗೆ ತೆರಳಿದರು ಮತ್ತು ಆಕೆಯ ಪತಿ ನೀರಿನ ಬಾಟಲಿಯನ್ನು ಖರೀದಿಸಲು ಒಳಗೆ ಕಾಲಿಟ್ಟರು. ಆಕೆ ತನ್ನ ಪತಿಗಾಗಿ ಕಾಯುತ್ತಿದ್ದಾಗ, ಕೆಲವು ಯುವಕರು ಆಕೆಯ ಬಳಿಗೆ ಬಂದು ಅಶ್ಲೀಲವಾದ ಕಾಮೆಂಟ್‌ಗಳನ್ನು ಮಾಡಿದರು ಮತ್ತು ಅವರು ಅವಳನ್ನು ನೋಡಿ ಶಿಳ್ಳೆ ಹೊಡೆಯುತ್ತಿದ್ದರು, ಅವಳು ಅದನ್ನು ವಿರೋಧಿಸಿ ಯುವಕನಿಗೆ ಮೂರ್ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಸ್ಥಳೀಯರು ಮಧ್ಯ ಪ್ರವೇಶಿಸಿದ ನಂತರ ಯುವಕರು ಅಲ್ಲಿಂದ ತೆರಳಿದರು. ದಂಪತಿ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಹೋಟೆಲ್‌ನಿಂದ ಹೊರಬರುತ್ತಿದ್ದಾಗ, ಯುವಕರು ಹಿಂದಿನಿಂದ ಬಂದು ಮಹಿಳೆಯ ಮುಖವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಯುವಕರ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ನಂತರ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಏತನ್ಮಧ್ಯೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗಾಯಾಳು ಮಹಿಳೆಯನ್ನು ಅವರ ನಿವಾಸದಲ್ಲಿ ಭೇಟಿಯಾದರು.ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement