ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಪಂಗೆ ಅವಿರೋಧ ಆಯ್ಕೆ…!

ಭೋಪಾಲ್: ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಪಂಚಾಯತ್ ಚುನಾವಣೆಗಳು ಜೂನ್ 25 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದರೂ, ಸಿಂಗ್ ಅವರ ಪತ್ನಿ ಲಲಿತಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಂಬಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಭಾರತದ ಡಕಾಯಿತ ರಾಜ ಎಂದು ಕರೆಯಲ್ಪಡುತ್ತಿದ್ದ. ಅವರು ತಮ್ಮ ಮೀಸೆಗೆ ಹೆಸರುವಾಸಿಯಾಗಿದ್ದಾರೆ.

ಮಲ್ಖಾನ್ ಸಿಂಗ್ ಭಿಂಡ್‌ನಿಂದ ಬಂದವರು. ಆದರೆ ಈಗ ಗುನಾದ ಸುಂಗಯಾಯಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಮತ್ತು ಅವರ ಗ್ಯಾಂಗ್ 1982 ರಲ್ಲಿ ಆಗಿನ ಮಧಯಪ್ರದೇಶದ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮುಂದೆ ಶರಣಾಗಿದ್ದರು. ಅವರ ವಿರುದ್ಧ 18 ಡಕಾಯಿತಿಗಳು, 28 ಅಪಹರಣ ಪ್ರಕರಣಗಳು ಮತ್ತು 17 ಕೊಲೆ ಪ್ರಕರಣಗಳು ಸೇರಿದಂತೆ 94 ಪೊಲೀಸ್ ಪ್ರಕರಣಗಳಿವೆ.
ಲಲಿತಾ ರಜಪೂತ್ ಅವರು ಮಲ್ಖಾನ್ ಸಿಂಗ್ ಅವರ ಎರಡನೇ ಪತ್ನಿ. ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸಿಇಟಿ ಫಲಿತಾಂಶ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ ರಾಜ್ಯಕ್ಕೆ ಪ್ರಥಮ

“ನನ್ನ ಗ್ರಾಮದಲ್ಲಿ ಯಾವುದೇ ಬೆಳಕು ಅಥವಾ ರಸ್ತೆ ಅಥವಾ ಒಳಚರಂಡಿ ಇಲ್ಲ, ಆದ್ದರಿಂದ ನನ್ನ ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ” ಎಂದು ಶ್ರೀಮತಿ ರಜಪೂತ್ ಹೇಳಿದ್ದಾರೆ.
ಪಂಚಾಯತಿಯ ಸುಮಾರು ನಾಲ್ಕು ಲಕ್ಷ ಸ್ಥಾನಗಳಿಗೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಜೂನ್ 25 ರಂದು, ಎರಡನೇ ಮತ್ತು ಮೂರನೇ ಹಂತದ ಮತದಾನ ಕ್ರಮವಾಗಿ ಜುಲೈ 1 ಮತ್ತು ಜುಲೈ 8 ರಂದು ನಡೆಯಲಿದೆ.
ಜುಲೈ 8, ಜುಲೈ 11, ಜುಲೈ 14 ಮತ್ತು ಜುಲೈ 15 ರಂದು ಗ್ರಾಮ ಪಂಚಾಯತದಿಂದ ಜಿಲ್ಲಾ ಪಂಚಾಯತದ ಸದಸ್ಯರ ವರೆಗೆ ವಿವಿಧ ಹುದ್ದೆಗಳಿಗೆ ಮತ ಎಣಿಕೆ ನಡೆಯಲಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement