ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇಂದು, ಗುರುವಾರ ರಾಜ್ಯದಲ್ಲಿ ಒಟ್ಟು 648 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಜೊತೆಗೆ ಒಂದು ಸಾವು ವರದಿಯಾಗಿದೆ.
532 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,997ಕ್ಕೆ ತಲುಪಿದೆ. ರಾಜ್ಯದ ಇಂದಿನ ಸಕಾರಾತ್ಮಕ ಶೇ. 2.76ಕ್ಕೆ ತಲುಪಿದೆ.
ಬೆಂಗಳೂರು ನಗರದಲ್ಲೇ 615 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಬೆಂಗಳೂರು ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 3,843ಕ್ಕೆ ಏರಿಕೆ ಕಂಡಿದೆ. ಜೊತೆಗೆ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಒಂದು ಸಾವು ದಾಖಲಾಗಿದೆ.
ಬೆಂಗಳೂರು ಹೊರತು ಪಡಿಸಿ ಉಳಿದಂತೆ 12 ಜಿಲ್ಲೆಗಳಲ್ಲಿ 33 ಪ್ರಕರಣ ಮತ್ತು 17 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇಂದು ಗುರುವಾರ ಒಟ್ಟು 2,50,510 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 23,452 ರಕ್ತದ ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಬೆಂಗಳೂರು ನಗರ -615, ದಕ್ಷಿಣಕನ್ನಡ -12, ಮೈಸೂರು -5, ಧಾರವಾಡ -4, ಶಿವಮೊಗ್ಗ -3, ತುಮಕೂರು -2, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಹಾಸನ, ಕಲಬುರಗಿ, ಮತ್ತು ಉತ್ತರಕನ್ನಡದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 648 ಪ್ರಕರಣಗಳು ದಾಖಲಾಗಿದೆ. .
ನಿಮ್ಮ ಕಾಮೆಂಟ್ ಬರೆಯಿರಿ