ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಹಣ…! ಸುದ್ದಿ ತಿಳಿದು ಜನ ಮುಗಿಬಿದ್ರು

ಮುಂಬೈ: ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂ. ಹಣ ಡ್ರಾ ಮಾಡಲು ಹೋದಾಗ 5 ಪಟ್ಟು ಹೆಚ್ಚಿನ ಹಣ ಬಂದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಾಗ್ಪುರದ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಹಣ ಬಂದಿದ್ದು ನೋಡಿ ಕಂಗಾಲಾಗಿದ್ದಾನೆ. 500 ರೂ. ಡ್ರಾ ಮಾಡಿದರೆ 2,500 ರೂ. ಹಣ ಬಂದಿದೆ. 500 ರೂ.ಗಳ ಒಂದು 1 ನೋಟಿನ ಬದಲು 5 ನೋಟುಗಳು ಬಂದಿವೆ. ಅವರು ಇದೇ ಪ್ರಕ್ರಿಯೆಯನ್ನು ಮತ್ತೆ ಪುನರಾವರ್ತಿಸಿದಾಗಲೂ ಹೀಗೆಯೇ ಆಗಿದೆ.

ಈ ವಿಷಯ
ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ದುಡ್ಡು ಡ್ರಾ ಮಾಡಲು ಜನರು ಎಟಿಎಂ ಮುಂದೆ ಮುಗಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಅನ್ನು ಸ್ಥಗಿತಗೊಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಪರಿಶೀಲನೆ ವೇಳೆ 100 ರೂ. ಮುಖಬೆಲೆಯ ನೋಟನ್ನು ಇಡಬೇಕಿದ್ದ ಟ್ರೇನಲ್ಲಿ 500 ರೂ. ಮುಖಬೆಲೆಯ ನೋಟುಗಳನ್ನು ತಪ್ಪಾಗಿ ಇಡಲಾಗಿತ್ತು. ಈ ಕಾರಣಕ್ಕೆ ಎಟಿಎಂ ಹೆಚ್ಚುವರಿ ನೋಟುಗಳನ್ನು ನೀಡುತ್ತಿತ್ತು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement