ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮಗು ಅಪಹರಣ ಪ್ರಕರಣ: ತಾಯಿ-ಕುಟುಂಬದತ್ತ ಸಂಶಯದ ಬೊಟ್ಟು..?!

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಮಕ್ಕಳ ವಾರ್ಡ್‌ನಿಂದ ನಾಲ್ಕು ದಿನಗಳ ಹಿಂದೆ ನಡೆದಿದ್ದ, 40 ದಿನದ ಹೆಣ್ಣು ಮಗು ಅಪಹರಣ ಮತ್ತು ಮಾರನೇ ದಿನವೇ ದಿಢೀರ್‌ ಪ್ರತ್ಯಕ್ಷ ಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಕಂಡುಬಂದಿದ್ದು, ಮಗುವಿನ ತಾಯಿಯೇ ಪ್ರಕರಣದ ಸೂತ್ರಧಾರಿಯೇ ಎಂಬ ಸಂಶಯ ವ್ಯಕ್ತವಾಗಿದೆ. ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಜೂನ್ 13ರಂದು ಕಿಮ್ಸ್‌ನಲ್ಲಿ ಮಧ್ಯಾಹ್ನ ವಾರ್ಡ್‌ನಿಂದ ಮಗುವನ್ನು ಹೊರಗೆ ತಂದಾಗ, ವ್ಯಕ್ತಿಯೊಬ್ಬ ಏಕಾಏಕಿ ಮಗುವನ್ನು ಕಸಿದುಕೊಂಡು ಪರಾರಿಯಾದ ಎಂದು ಕುಂದಗೋಳದ ಸಲ್ಮಾ ಶೇಕ್ ಎಂಬವರು ಆರೋಪಿಸಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.

ನಂತರ ಮಗುವಿನ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ಸಹ ರಚಿಸಿದ್ದರು. ಘಟನೆಯ ಬೆನ್ನತ್ತಿದ್ದ ಪೊಲೀಸರು, ತಾಯಿ ಹೇಳಿಕೆ ಜೊತೆಗೆ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಆದರೆ ಮಾರನೇ ದಿನ ಬೆಳಿಗ್ಗೆ 6 ಗಂಟೆಗೆ ಕಿಮ್ಸ್‌ನ ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ಹಿಂಭಾಗದ ಹಳೇ ಕಟ್ಟಡದ ಬಳಿ ಮಗು ಪತ್ತೆಯಾಗಿತ್ತು.
ಹೀಗಾಗಿ ಮಗು ಕಸಿದುಕೊಂಡು ಹೋದವರು ಯಾರು..? ಮಾರನೇ ದಿನ ತಂದಿಟ್ಟವರು ಯಾರು ಎಂಬ ಪ್ರಶ್ನೆ ಮೂಡಿತ್ತು. ನಂತರ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಪೊಲೀಸರಿಗೆ ಆಸ್ಪತ್ರೆಯ ಸಿಸಿಟಿವ ಕ್ಯಾಮರಾದಲ್ಲಿ ಸಹ ಮಗುವಿನ ಎತ್ತಿಕೊಂಡ ಹೋದ ಯಾವ ಕುರುಹೂ ಸಿಗಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದುವಿನ ತಾಯಿ ಸಲ್ಮಾ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆದರೆ ವಿಚಾರಣೆ ಸಂದರ್ಭದಲ್ಲಿ ಅವಳುವಿಭಿನ್ನ ಹೇಳಿಕೆಗಳನ್ನು ನೀಡಿದ್ದಾಳೆ ಎಂದು ಹೇಳಲಾಘಿದ್ದು, ಇದು ತಾಯಿ ಹಾಗೂ ಕುಟುಂಬದ ಮೇಲೆಯೇ ಸಂಶಯಕ್ಕೆ ಕಾರಣವಾಗಿದೆ. ಈಗ ಪೊಲೀಸರು ಎಲ್ಲ ಆಯಾಮದ ಕುರಿತೂ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಸತ್ಯ ಹೊರಬರಲಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement