ಕುಮಟಾ:  ದ್ವಿತೀಯ ಪಿಯು ಫಲಿತಾಂಶ, ಬಾಳಿಗಾ ವಾಣಿಜ್ಯ ಕಾಲೇಜಿಗೆ ಮೇಘಾ ಹೆಗಡೆ ಪ್ರಥಮ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಳಿಗಾ ವಾಣಿಜ್ಯ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು ಪರೀಕ್ಷೆ ಎದುರಿಸಿದ ಒಟ್ಟೂ ೧೧೦ ವಿದ್ಯಾರ್ಥಿಗಳಲ್ಲಿ ೨೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಮೇಘಾ ದತ್ತಾತ್ರಯ ಹೆಗಡೆ ಶೇ. ೯೬.೮೩ (೫೮೧/೬೦೦) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರವಿ ಗೋವಿಂದರಾಯ ಪ್ರಭು ಶೇ. ೯೬.೬೬ (೫೮೦/೬೦೦) ಅಂಕಗಳಿಸಿ ದ್ವಿತೀಯ ಸ್ಥಾನ ಹಾಗೂ ಹಾಗೂ ಶ್ರೀಲತಾ ವಿಶ್ವನಾಥ ಕಿಣಿ ಶೇ. ೯೫.೧೬ (೫೭೧/೬೦೦) ತೃತೀಯ ಸ್ಥಾನ ಪಡೆದಿದ್ದಾರೆ. ಸುಪ್ರಭಾ ಶಾಸ್ತ್ರೀ ಲೆಕ್ಕಶಾಸ್ತ್ರ ವಿಷಯದಲ್ಲಿ, ಅಂಕಿತಾ ಶಿರೋಡಕರ್ ಸಂಸ್ಕೃತ ವಿಷಯದಲ್ಲಿ ಹಾಗೂ ರವಿ ಪ್ರಭು ಕನ್ನಡ ವಿಷಯದಲ್ಲಿ ನೂರಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ಮಹಾವಿದ್ಯಾಲಯಕ್ಕೆ
ಕೀರ್ತಿಯನ್ನು ತಂದ ಈ ಮೇಲಿನ ವಿದ್ಯಾರ್ಥಿಗಳನ್ನು ಆಡಳಿತ ಮಡಳಿಯವರು, ಕಾಲೇಜಿನ ಪ್ರಾಚಾರ್ಯರು ಹಾಗೂ
ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement