ದ್ವಿತೀಯ ಪಿಯು ಫಲಿತಾಂಶ: ಧಾರವಾಡ ಜೆಎಸ್‌ಎಸ್‌ ಎಸ್‌ಎಂಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರೋಹಿಣಿ ಬಿದ್ನೂರಮಠ 600/570 (95%), ತೇಜಶ್ವಿನಿ ನಿಂಗೊಲ್ಲಿ 600/570 (95%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ. ನಂತರದಲ್ಲಿ ಕ್ರಮವಾಗಿ ನಮನ ಭಟ್ 600/558 (93%), ಪ್ರಸನ್ ಧೂಪದ್ 600/548 (91.33%), ರಿಷಭ್ ಮಲೋಡ್ 600/541(90.16%) ಅಂಕಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರೀಯಾ ಜೆ 600/571 (95.16%) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರ ಕ್ರಮವಾಗಿ ದಿಯಾ ಜಿರಾವಾಲಾ 600/567 (94.5%), ಶ್ರುಸ್ತಿ ದೇಶಪಾಂಡೆ, 600/566 (94.33%) ಪೂರ್ವಿ ಹೆಗ್ಡೆ 600/563 (93.83%), ಉಷಾ ಹೊಸಮನಿ 600/561 (93.5%) ಉತ್ತಮ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಜೆಎಸ್‌ಎಸ್‌ ಸಂಸ್ಥೆ ಅಧ್ಯಕ್ಷರು, ಕಾರ್ಯದರ್ಶಿ, ಹಣಕಾಸು ಅಧಿಕಾರಿ, ಪ್ರಾಂಶುಪಾಲರು ಹಾಗೂ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement