ಪಠ್ಯ ಪರಿಷ್ಕರಣೆ: ದೇವೇಗೌಡರ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ-ಸಿಎಂ ಬೊಮ್ಮಾಯಿ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಕುರಿತಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಬರೆದಿರುವ ಪತ್ರ ಹಾಗೂ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಂದ ಬರೆದ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ವಿವರಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಮಾಜಿ ಪ್ರಧಾನಿಗಳು ನಮಗೆಲ್ಲರಿಗೂ ಹಿರಿಯರು. ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸ್ತೇನೆ ಎಂದು ತಿಳಿಸಿದರು.

ಜನಕ್ಕೆ ದ್ರೋಹವೆಸಗಿ ಯೋಗ ಮಾಡಲು ರಾಜ್ಯಕ್ಕೆ ಮೋದಿ ಬಂದಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ಕಿಡಿಕಾರಿದರು. ಕೋವಿಡ್​ ಸಂದರ್ಭದಲ್ಲಿ ಮೋದಿ ಅವರ ಆಡಳಿತದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಲಸಿಕೆ ಮತ್ತು ಆರೋಗ್ಯ ಉಪಕರಣಗಳ ಉತ್ಪಾದನೆ ಬಗ್ಗೆ ಹಾಗೂ ಇತರ ರಾಷ್ಟ್ರಗಳಿಗೆ ನಮ್ಮ ದೇಶ ನೆರವಾಗಿದ ಬಗ್ಗೆ ಜನತೆಗೆ ತಿಳಿದಿದೆ. ರಾಜಕೀಯವಾಗಿ ಮಾತಾಡಬೇಕು ಎಂದು ಮಾತಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ರಾಜ್ಯದ ಆಡಳಿತಕ್ಕೆ ಮೋದಿ ಮೆಚ್ಚುಗೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೋದಿಯವರು ಯಾವಾಗಲೂ ಸುಶಾಸನ, ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಂಡವರು. ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಜಾರಿ ಆಗಿದೆ. ಮೋದಿಯವರ ಮೆಚ್ಚುಗೆ ನನಗೆ ದೊಡ್ಡ ಶಕ್ತಿ ನೀಡಿದೆ. ನಾನು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ಅವರ ಮೆಚ್ಚುಗೆ ಪುಷ್ಟಿ ಕೊಟ್ಟಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ನಾಳೆ ಸ್ವಾಮೀಜಿಗಳ ಸಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದರ ಬಗ್ಗೆ ಸಮುದಾಯವರು ಮತ್ತು ಸಿ.ಸಿ. ಪಾಟೀಲ್ ಅವರು ಸ್ವಾಮೀಜಿಗಳ ಜೊತೆ ಮಾತನಾಡಲಿದ್ದಾರೆ ಎಂದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement