ಶಿವಸೇನಾದ ಇನ್ನೂ ನಾಲ್ವರು ಶಾಸಕರು ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆ

ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ಅವರ ಬಣಕ್ಕೆ ಶಿವಸೇನಾದ ಇನ್ನೂ ನಾಲ್ವರು ಶಾಸಕರು ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಸ್ಸಾಂನ ಗುವಾಹತಿಯಲ್ಲಿರುವ ‘ರಾಡಿಸನ್ ಬ್ಲೂ’ ಪಂಚತಾರಾ ಹೋಟೆಲ್‌ನಲ್ಲಿ ಏಕನಾಥ ಶಿಂಧೆ ಅವರು ಶಾಸಕರನ್ನು ಬರಮಾಡಿಕೊಂಡಿದ್ದು, ಶಿವಸೇನಾದ ಮತ್ತಿಬ್ಬರು ಶಾಸಕರು ಬುಧವಾರ ತಡರಾತ್ರಿ ಗುಜರಾತಿನ ಸೂರತ್‌ಗೆ ತೆರಳಿ ಶಿಂಧೆ ಬಣಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ಶಿಂಧೆ ನೇತೃತ್ವದ ಶಾಸಕರ ಗುಂಪು ಬಂಡಾಯ ಸಾರಿದ ಬೆನ್ನಲ್ಲೇ ಪಕ್ಷದ ಶಾಸಕರು ಬಯಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಹೇಳಿದ ನಂತರ ಮುಖ್ಯಮಂತ್ರಿಗಳ ನಿವಾಸ ವರ್ಷ ಖಾಲಿ ಮಾಡಿರುವ ಉದ್ಧವ್‌ ಠಾಕ್ರೆ ತಮ್ಮ ಕುಟುಂಬದ ನಿವಾಸ ಮಾತೋಶ್ರೀಗೆ ತೆರಳಿದ್ದಾರೆ. ಏಕನಾಥ ಶಿಂಧೆ ಅವರು ಹದಿಮೂರು ಶಾಸಕರನ್ನು ಹೊರತಪಡಿಸಿ ಉಳಿದೆಲ್ಲರೂ ತಮ್ಮ ಬಣಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಏತ್ಮಧ್ಯೆ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿಂಧೆ, ‘ಶಿವಸೇನಾ ಉಳಿಯ ಬೇಕು ಎಂದಿದ್ದರೆ, ಸಿದ್ಧಾಂತಕ್ಕೆ ವಿರುದ್ಧವಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗಿನ ಅಸಹಜ ಮೈತ್ರಿಯನ್ನು ತೊರೆಯಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement