ಹಣಕಾಸು ಸಂಸ್ಥೆ ಉದ್ಯೋಗಿಗೆ 35 ಲಕ್ಷ ರೂ. ಪಂಗನಾಮ ಹಾಕಿದ ಸೋಶಿಯಲ್ ಮೀಡಿಯಾ ಗೆಳತಿ…!

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ.
ನ್ಯಾನ್ಸಿ ವಿಲಿಯಂ ಎಂಬ ಆರೋಪಿ ಗೆಳೆತನವಾದ ನಂತರ ಅನೇಕ ಬಾರಿ ವೀಡಿಯೊ ಕಾಲ್ ಮಾಡಿ, ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯನ್ನು ನಂಬಿದ ಹಣಕಾಸು ಕಂಪನಿ ಸಿಬ್ಬಂದಿ 35 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆಕೆ ತನ್ನ ಪ್ರೊಫೈಲ್ ಅನ್ನು ಡಿಲೀಟ್ ಮಾಡಿದ ನಂತರ ಉದ್ಯೋಗಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಆಕೆ ನಂಬಿಸಿದ್ದಳು. ಆಕೆಯನ್ನು ನಂಬಿದ ಉದ್ಯೋಗಿ, ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಆಕೆಯ ಐದು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾನೆ. ವಾರದಿಂದ ಆಕೆ ಕಡೆಯಿಂದ ಫೋನ್ ಇಲ್ಲ, ಮೆಸೇಜ್ ಇಲ್ಲದಂತಾಗಿದೆ. ನಂತರ ಸೋಶಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಸಿಇಎನ್ (ಪೂರ್ವ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲ ತಿಂಗಳ ಹಿಂದೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ ವೀಡಿಯೊ ಕಾಲ್ ಮಾಡಲು ನಂಬರ್ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ಮತ್ತು ವ್ಯವಹಾರದ ಮಾಹಿತಿ ಬಗ್ಗೆ ಉದ್ಯೋಗಿ ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸರು ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement