ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಮಂತ್ರಿ ಬಂಧಿಸಿದ ಇಡಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆಕ್ಟ್ (PMLA), 2002 ರ ಅಡಿಯಲ್ಲಿ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ರಾತ್ರಿ ಬಂಧಿಸಿದೆ.
ಗ್ರಾಹಕರಿಗೆ ವಂಚನೆ, ಹಣಕಾಸು ಸಂಸ್ಥೆಗಳಿಗೆ ಮೋಸ ಹಾಗೂ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸುಶೀಲ್‌ ಮಂತ್ರಿ ಅವರಿಗೆ ಇ.ಡಿ ಸೂಚಿಸಿತ್ತು. ಉದ್ಯಮಿ ವಿಚಾರಣೆಗೆ ಹಾಜರಾಗಿದ್ದರು. ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷ್ಯ ನಾಶ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಅಥವಾ ದೇಶ ತೊರೆಯುವ ಅನುಮಾನದ ಮೇಲೆ ಸುಶೀಲ್‌ ಅವರನ್ನು ಬಂಧಿಸಲಾಗಿದೆ. ಸುಶೀಲ್‌ ಮಂತ್ರಿ ಅವರನ್ನು ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಬಂಧಿಸಿದೆ ಎಂದು ಹೇಳಲಾಗಿದೆ.
ಕಂಪನಿ ಮತ್ತು ಅದರ ನಿರ್ದೇಶಕರು ಮತ್ತು ಇತರ ಅನೇಕ ಉದ್ಯೋಗಿಗಳ ವಿರುದ್ಧ 2020 ರಲ್ಲಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧಾರದ ಮೇಲೆ ಇಡಿ ಮಾರ್ಚ್ 2022 ರಲ್ಲಿ ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತು.

ಅನೇಕ ಮನೆ ಖರೀದಿದಾರರು ಪೊಲೀಸರು ಮತ್ತು ಇಡಿಗೆ ದೂರುಗಳನ್ನು ಸಲ್ಲಿಸಿದ್ದಾರೆ. ಆರೋಪಿತ ಘಟಕಗಳು/ವ್ಯಕ್ತಿಗಳು ಮನಿ ಲಾಂಡರಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ನಿರೀಕ್ಷಿತ ಖರೀದಿದಾರರಿಗೆ ದಾರಿತಪ್ಪಿಸುವ ಬ್ರೋಷರ್‌ಗಳನ್ನು ತೋರಿಸಿದ್ದಾರೆ, ಸಾವಿರಾರು ಖರೀದಿದಾರರಿಂದ ₹1,000 ಕೋಟಿಗೂ ಹೆಚ್ಚು ಮುಂಗಡ ಹಣ ಸಂಗ್ರಹಿಸಿದೆ. ಆದರೆ, ಏಳರಿಂದ 10 ವರ್ಷ ಕಳೆದರೂ ಅವರಿಗೆ ಫ್ಲ್ಯಾಟ್‌ಗಳನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) ಸ್ಪಷ್ಟ ನಿರ್ದೇಶನದ ನಂತರವೂ ಕಂಪನಿಯು ಖರೀದಿದಾರರಿಗೆ ಮೊತ್ತವನ್ನು ಮರುಪಾವತಿ ಮಾಡಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಾಜೆಕ್ಟ್‌ಗಳ ನಿರ್ಮಾಣಕ್ಕಾಗಿ ಕಂಪನಿಯು ಖರೀದಿದಾರರಿಂದ ಸಂಗ್ರಹಿಸಿದ ಮೊತ್ತವನ್ನು ಕಂಪನಿಯ ನಿರ್ವಹಣೆಯಿಂದ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಮತ್ತು ಆದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಡಿ ಹೇಳಿದೆ.
ಪ್ರಸ್ತುತ, ಗುಂಪು ವಿವಿಧ ಹಣಕಾಸು ಸಂಸ್ಥೆಗಳಿಂದ ಒಟ್ಟು ₹ 5,000 ಕೋಟಿ ಸಾಲಗಳನ್ನು ಹೊಂದಿದೆ ಎಂದು ED ಹೇಳಿದೆ. ಅದರಲ್ಲಿ ಅಂದಾಜು ₹ 1,000 ಕೋಟಿ ಬಾಕಿ ಉಳಿದಿದೆ ಎಂದು ಪ್ರಕಟಣೆ ತಿಳಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement