ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು : ನಿರ್ಧಾರ ತೆಗೆದುಕೊಳ್ಳಲು ಉದ್ಧವ್‌ ಠಾಕ್ರೆಗೆ ಸಂಪೂರ್ಣ ಅಧಿಕಾರ ನೀಡಿದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ, 6 ನಿರ್ಣಯ ಅಂಗೀಕಾರ

ಮುಂಬೈ: ಹಿರಿಯ ನಾಯಕ  ಹಾಗೂ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ನಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರು ನಿರ್ಣಯಗಳನ್ನು ಅಂಗೀಕರಿಸಿದೆ.
ಒಂದು ನಿರ್ಣಯವು ಬಂಡಾಯ ಶಿಬಿರವನ್ನು ಬಾಳಾಸಾಹೇಬ್ ಅವರ ಹೆಸರನ್ನು ‘ದುರುಪಯೋಗ’ಪಡಿಸಿಕೊಳ್ಳುವುದನ್ನು ನಿಲ್ಲಿಸಲು ಸೂಚಿಸಿದೆ ಮತ್ತು ಇನ್ನೊಂದು ಶಿಂಧೆಯವರ ಬಂಡಾಯದ ದೃಷ್ಟಿಯಿಂದ ಸಂಘಟನೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉದ್ಧವ್ ಠಾಕ್ರೆ ಅವರಿಗೆ ಅಧಿಕಾರ ನೀಡಿದೆ.
ಶಿವಸೇನೆಯ ಕೆಲವು ಶಾಸಕರು ಪ್ರದರ್ಶಿಸಿದ ವಿಶ್ವಾಸಘಾತುಕತನವನ್ನು ಖಂಡಿಸಲಾಗಿದೆ ಮತ್ತು ಪಕ್ಷ ಮತ್ತು ಅದರ ಸಂಘಟನೆಯು ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರ ಹಿಂದೆ ಬಲವಾಗಿ ನಿಂತಿದೆ ಹಾಗೂ ಬಿಕ್ಕಟ್ಟಿನ ಸನ್ನಿವೇಶದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಅದಕ್ಕೆ ಬೇಕಾದ ನಿರ್ಧಾರಗಳನ್ನು ಜಾರಿಗೆ ತರಲು ಠಾಕ್ರೆ ಅವರಿಗೆ ಪಕ್ಷವು ಎಲ್ಲಾ ಅಧಿಕಾರವನ್ನು ನೀಡುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

“ರಾಷ್ಟ್ರೀಯ ಕಾರ್ಯಕಾರಿಣಿಯು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಅವರು ಮಾಡಿದ ಕೆಲಸ ಮತ್ತು ಕೋವಿಡ್ ಸಮಯದಲ್ಲಿ ಮಹಾರಾಷ್ಟ್ರದ ಜನತೆಯ ಆರೈಕೆಗಾಗಿ ಅವರು ಗಳಿಸಿದ ಖ್ಯಾತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತದೆ” ಎಂದು ರಾಷ್ಟ್ರೀಯ ಕಾರ್ಯಕಾರಿಣಿಯು ಅಂಗೀಕರಿಸಿದ ಎರಡನೇ ನಿರ್ಣಯ ಹೇಳಿದೆ.
ಮುಂಬರುವ ಮುನ್ಸಿಪಲ್ ಕಾರ್ಪೊರೇಶನ್, ಕೌನ್ಸಿಲ್, ಪಂಚಾಯತ್, ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನೆ ಗೆಲುವು ಸಾಧಿಸಲು ರಾಷ್ಟ್ರೀಯ ಕಾರ್ಯಕಾರಿಣಿಯು ತನ್ನ ಸಂಕಲ್ಪವನ್ನು ಅಂಗೀಕರಿಸುತ್ತದೆ ಎಂದು ಮೂರನೇ ನಿರ್ಣಯದಲ್ಲಿ ತಿಳಿಸಲಾಗಿದೆ.
ಸುಧಾರಣಾ ಕಾರ್ಯಗಳು, ಕರಾವಳಿ ರಸ್ತೆ, ಮೆಟ್ರೋ ರೈಲು, ಆಸ್ತಿ ತೆರಿಗೆ ವಿನಾಯಿತಿಗಳು ಮತ್ತು ತಾನು ಕೈಗೊಂಡ ಇತರ ಅಭಿವೃದ್ಧಿ ಯೋಜನೆಗಳಿಗಾಗಿ ರಾಷ್ಟ್ರೀಯ ಕಾರ್ಯಕಾರಿಣಿಯು ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿಗೆ ಧನ್ಯವಾದ ಹೇಳಲು ಇಷ್ಟಪಡುತ್ತದೆ. ಹಾಗೆಯೇ, ಉದ್ಧವ್ ಮತ್ತು ಆದಿತ್ಯ ಠಾಕ್ರೆ ಯಶಸ್ಸಿಗೆ ಧನ್ಯವಾದಗಳನ್ನು ಹೇಳಿದೆ. ಈ ಇಬ್ಬರು ನಾಯಕರ ನಾಯಕತ್ವದಲ್ಲಿ ನಾವು ಮುಂಬೈನ ನಿರಂತರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ನಾಲ್ಕನೇ ನಿರ್ಣಯವು ಹೇಳಿದೆ.
ಶಿವಸೇನೆ ಮತ್ತು ಬಾಳ್ ಠಾಕ್ರೆ ಒಂದೇ ನಾಣ್ಯದ ಎರಡು ಮುಖಗಳು, ಅವುಗಳು ಬೇರ್ಪಡಿಸಲಾಗದವು. ಹಾಗಾಗಿ ಶಿವಸೇನೆ ಹೊರತು ಪಡಿಸಿ ಬೇರೆ ಯಾರೂ ಬಾಳಾಸಾಹೇಬ್ ಅವರ ಹೆಸರನ್ನು ಬಳಸುವಂತಿಲ್ಲ ಎಂದು ಐದನೇ ನಿರ್ಣಯ ಹೇಳಿದೆ.
ಆರನೇ ನಿರ್ಣಯದ ಪ್ರಕಾರ, ಶಿವಸೇನೆ ಯಾವಾಗಲೂ ಹಿಂದುತ್ವ, ಅಖಂಡ ಮಹಾರಾಷ್ಟ್ರ ಮತ್ತು ಮರಾಠಿ ಅಸ್ಮಿತಾ ಕಲ್ಪನೆಗೆ ಬದ್ಧವಾಗಿದೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ಪಕ್ಷವು ಎಂದಿಗೂ ಯಾರನ್ನೂ ಅವಮಾನಿಸಿಲ್ಲ ಮತ್ತು ಭವಿಷ್ಯದಲ್ಲಿ ಹಾಗೆ ಮಾಡುವುದಿಲ್ಲ. ಶಿವಸೇನೆಯ ವಿರುದ್ಧ ವಿಶ್ವಾಸಘಾತುಕ ಕೃತ್ಯ ಎಸಗಿರುವವರು, ಅವರು ಎಷ್ಟೇ ಹಿರಿಯರಾಗಿರಬಹುದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಅವರಿಗೆ ಸಂಪೂರ್ಣ ಅಧಿಕಾರ ನೀಡುತ್ತೇವೆ. ರಾಷ್ಟ್ರೀಯ ಕಾರ್ಯಕಾರಿಣಿಯು ಅವರ ಹಿಂದೆ ದೃಢವಾಗಿ ಹಿಂದೆ ನಿಂತಿದೆ ಎಂದು ನಿರ್ಣಯ ಹೇಳಿದೆ.
ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಏಕನಾಥ್ ಶಿಂಧೆ ಪ್ರಚೋದಿಸಿದ್ದಾರೆ. ಅವರು ಪರಿಷತ್‌ ಚುನಾವಣಾ ಫಲಿತಾಂಶದ ನಂತರ ಹಲವಾರು ಶಾಸಕರೊಂದಿಗೆ ಅಜ್ಞಾತ ಸ್ಥಳಕ್ಕೆ ಹೋದರು. ವಿಧಾನಸಭೆಯಲ್ಲಿ ಸಾಕಷ್ಟು ಸಂಖ್ಯೆಯಿಲ್ಲದಿದ್ದರೂ ಬಿಜೆಪಿ ಐದನೇ ಸ್ಥಾನವನ್ನು ಗೆದ್ದುಕೊಂಡ ಮತದಾನದ ಕೆಲವೇ ಗಂಟೆಗಳ ನಂತರ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಸೋಮವಾರ ತಡರಾತ್ರಿ ಸೂರತ್‌ನ ಹೋಟೆಲ್‌ಗೆ ತಲುಪಿದರು. ಪ್ರಸ್ತುತ ಅಸ್ಸಾಂನ ಗುವಾಹತಿಯಲ್ಲಿರುವ ಬಂಡಾಯ ಪಾಳಯಕ್ಕೆ ಇನ್ನಷ್ಟು ಶಾಸಕರು ಸೇರ್ಪಡೆಗೊಂಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement