ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಾರ್ಯಾಲಯ ವರದಿ ಕೇಳಿದ್ದು ನಾಚಿಕೆಗೇಡಲ್ಲವೇ: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಾರ್ಯಾಲಯವು ರಾಜ್ಯ ಸರ್ಕಾರದ ಬಳಿ ವರದಿ ಕೇಳಿರುವುದು ನಾಚಿಕೆಗೇಡಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಕರ್ನಾಟಕಕ್ಕೆ ಬಂದಾಗ ತಮ್ಮ ಭಾಷಣದಲ್ಲಿ ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಭಾರೀ ಹೊಗಳಿಕೊಂಡಿದ್ದ ಪ್ರಧಾನಿ ಮೋದಿಗೆ ಈಗ ಉತ್ತರ ಸಿಕ್ಕಿರಬಹುದು! ಪ್ರಧಾನಿಗಳೇ, ಇದೇ ನಿಮ್ಮ ಅಸಲಿ ಅಚ್ಛೆ ದಿನಗಳು! ಅರಿವಾಯಿತೆ? ಎಂದು ಕಾಂಗ್ರೆಸ್‌ ಕುಟುಕಿದೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಕೊಮ್ಮಘಟ್ಟದಲ್ಲಿ ಮಾಡಿದ್ದ ರಸ್ತೆ ಎರಡೇ ದಿನಗಳಲ್ಲಿ ಕುಸಿದು ಹೋಗಿತ್ತು.

ಈ ಹಿನ್ನೆಲೆಯಲ್ಲಿ ಫೋಟೋ ಹಾಕಿ ಪ್ರಧಾನಿ ಮೋದಿಗೆ ಟ್ಯಾಗ್ ಮಾಡಲಾಗಿತ್ತು. ಬಳಿಕ ಪ್ರಧಾನಿ ಕಾರ್ಯಾಲಯ ರಾಜ್ಯ ಸರ್ಕಾರಕ್ಕೆ ಕಳಪೆ ಕಾಮಗಾರಿ ಕುರಿತು ವರದಿ ಕೇಳಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿ ನಡೆಸಿದ ಇಂಜಿನಿಯರ್‌ಗೆ ನೋಟಿಸ್ ನೀಡಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement