ಧಾರವಾಡ: ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ

ಧಾರವಾಡ: ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ” ಆಯೋಜಿಸಲಾಗಿತ್ತು. ಮಕ್ಕಳು ಮಾವಿನ ಹಣ್ಣಿನಿಂದ ತಯಾರಿಸಿದ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಿ ತಂದಿದ್ದರು.
೭ನೇ ತರಗತಿಯ ೨೦೦ಕ್ಕೂ ಹೆಚ್ಚು ಮಕ್ಕಳು ಈ ಮೇಳದಲ್ಲಿ ಭಾಗವಹಿಸಿ ಮಾವಿನ ಹಣ್ಣಿನ ಪಾನೀಯ, ಬರ್ಫಿ, ಕೇಕ್, ಉಪ್ಪಿನಕಾಯಿ, ಚಟ್ನಿ, ಚಿತ್ರನ್ನ, ಹಲ್ವ, ಗೊಜ್ಜು, ಜಾಮ್ ಹೀಗೆ ಹತ್ತು ಹಲವಾರು ತಿನಿಸುಗಳನ್ನು ತಯಾರಿಸಿ ತಂದಿದ್ದರು.

ಮ್ಯಾಂಗೋ ಮೇಳವನ್ನು ಉದ್ಘಾಟಿಸಿದ ಪ್ರಾಚಾರ್ಯೆ ಸಾಧನಾ ಎಸ್ ಅವರು ಮಾವಿನ ಹಣ್ಣು ಹಣ್ಣುಗಳ ರಾಜ. ಮಾವಿನ ಹಣ್ಣಿನಿಂದ ತಯಾರಿಸಿದ ಪದಾರ್ಥಗಳು ಎಲ್ಲರಿಗೂ ಇಷ್ಟ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಹುಶಃ ಮಾವಿನ ಹಣ್ಣನ್ನು ಸವಿಯದವರು ಯಾರೂ ಇರಲಿಕ್ಕಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ, ಸಹಕರಿಸಿದ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು. ಎಲ್ಲ ಮಕ್ಕಳು ಮ್ಯಾಂಗೋ ಮೇಳದಲ್ಲಿ ತಯಾರಿಸಿದ ಮಾವಿನ ಹಣ್ಣಿನಿಂದ ತಯಾರಿಸಿದ ವಿವಿಧ ತಿಂಡಿ-ತಿನಿಸುಗಳನ್ನು ಸವಿದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement