ಮಹಾರಾಷ್ಟ್ರ ಬಿಕ್ಕಟ್ಟಿನ ನಡುವೆ, ಭೂ ಹಗರಣ ಪ್ರಕರಣದಲ್ಲಿ ಸಿಎಂ ಉದ್ಧವ್ ಟ್ರಬಲ್‌ಶೂಟರ್ ಸಂಜಯ್ ರಾವತ್‌ಗೆ ಇಡಿ ಸಮನ್ಸ್

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಪ್ರವೀಣ್ ರಾವತ್ ಮತ್ತು ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಅವರ ಕೆಲವು ಆಸ್ತಿಗಳನ್ನು ಇಡಿ ಈ ಹಿಂದೆ ಜಪ್ತಿ ಮಾಡಿತ್ತು.
ಸಮನ್ಸ್‌ಗೆ ಪ್ರತಿಕ್ರಿಯಿಸಿದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ಇಡಿ ಬಿಜೆಪಿಗೆ “ನಿಜವಾದ ಭಕ್ತಿ” ತೋರಿಸುತ್ತಿದೆ ಎಂದು ಹೇಳಿದ್ದಾರೆ. ಆರ್ಥಿಕ ಅವ್ಯವಹಾರಗಳು ಸಾಕ್ಷಿ ಸಮೇತ ಬಯಲಿಗೆ ಬಂದರೆ ಇಂತಹ ಘಟನೆಗಳು ನಡೆಯುವುದು ನಿಶ್ಚಿತ, ಇಡಿ ಒಂದು ದಿನದಲ್ಲಿ ಕ್ರಮ ಕೈಗೊಳ್ಳುವುದಿಲ್ಲ, ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಬಿಜೆಪಿ ಶಾಸಕ ರಾಮ್ ಕದಂ ಹೇಳಿದ್ದಾರೆ.
ಇಡಿ ಪುರಾವೆಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿರುವಾಗ ನಾವೇಕೆ ಅದನ್ನು ರಾಜಕೀಯದೊಂದಿಗೆ ಜೋಡಿಸಬೇಕು? ಇಡಿ ಧರ್ಮ ಅಥವಾ ಅಂತಸ್ತಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ, ಯಾರಾದರೂ ತಪ್ಪು ಮಾಡಿದರೆ, ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ತಮ್ಮ ಟ್ವಿಟ್ಟರ್‌ನಲ್ಲಿ ಹೀಗೆ ಹೇಳಿದ್ದಾರೆ, “ಊಹಿಸಬಹುದಾದಂತೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ಇಡಿ ಶಿವಸೇನಾ ಸಂಸದ ಮತ್ತು ನಾಯಕ ಅವರಿಗೆ ಸಮನ್ಸ್ ನೀಡಿದೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಮತ್ತು ಸರ್ಕಾರಗಳನ್ನು ಉರುಳಿಸಲು ಏಜೆನ್ಸಿಗಳನ್ನು ಸ್ಪಷ್ಟವಾಗಿ ಮತ್ತು ಬಹಿರಂಗವಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ | ಸರ್ಕಾರ ರಚಿಸಲು 44 ಶಾಸಕರು ಸಿದ್ಧ ; ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕನ ಹೇಳಿಕೆ

ಪತ್ರಾ ಚಾಲ್ ಭೂ ಹಗರಣ
ಇದಕ್ಕೂ ಮುನ್ನ ಸಂಜಯ್ ರಾವತ್ ಅವರ ಸಹಾಯಕ ಪ್ರವೀಣ್ ರಾವತ್‌ಗೆ ಸಂಬಂಧಿಸಿದ 9 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು 1,034 ಕೋಟಿ ರೂಪಾಯಿ ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರಿಗೆ ಸೇರಿದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಹಣಕಾಸು ನಿಗಾ ಸಂಸ್ಥೆಯು ಪ್ರವೀಣ್ ರಾವತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಿವಸೇನಾ ನಾಯಕ ಏಕನಾಥ್ ಶಿಂಧೆ ಗುವಾಹತಿಯ ಹೋಟೆಲ್‌ನಲ್ಲಿ ಹಲವಾರು ಶಾಸಕರೊಂದಿಗೆ ಮೊಕ್ಕಾಂ ಹೂಡಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement