ವಿಚಿತ್ರ…ತನಗೆ ಹೊಡೆದವರನ್ನು ಮಾತ್ರ ಬೆನ್ನು ಬಿಡದೆ ಅಟ್ಟಾಡಿಸಿಕೊಂಡು ಹೋಗುವ ದೇವಿಯ ಹರಕೆಯ ಕೋಣ…!

ಕೊಪ್ಪಳ: ವಿಚಿತ್ರ ಘಟನೆಯೊಂದರಲ್ಲಿ ಕೊಪ್ಪಳ ಜಿಲ್ಲೆಯ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣವೆಂದರೆ ಎಲ್ಲರೂ ಹೆದರುತ್ತಾರೆ…!
ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದ ಈ ಹರಕೆಯ ಕೋಣ, ತನಗೆ ಬೈದು ಹೊಡೆದವರನ್ನು ಹಿಡಿದು ಬಿಡದೆ ಕಾಡುತ್ತದೆಯಂತೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿದೆ..

ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್, ದೇವರಾಜು ಹಾಗೂ ಅನಿಲ್ ​​ಎಂಬುವರು ಅದನ್ನು ಬೈದು ಓಡಿಸಿದ್ದಾರೆ.
ಈಗ ಅವರ ವಿರುದ್ಧ ಕೋಣ ದ್ವೇಷ ಸಾಧಿಸುತ್ತಿದೆ. ಈ ಮೂವರು ಎಲ್ಲಿ ಕಂಡರೂ ಅವರನ್ನು ಬಿಡುತ್ತಿಲ್ಲ. ಅವರನ್ನು ಅಟ್ಟಾಡಿಸಿಕೊಂಡು ಹೋಗಿ ತಿವಿಯಲು ಯತನಿಸುತ್ತಿದೆ ಎಂದು ಹೇಳಲಾಗಿದೆ. ಅವರು ಮನೆಯೊಳಗೆ ಓಡಿದರೆ ಇವರ ಮನೆ ಮುಂದೆ ಕಾಯುತ್ತಿರುತ್ತದೆಯಂಯೆ..! ಇದು ಕಂಟೆಮ್ಮ ದೇವಿಯ ಮಹಿಮೆ ಎಂದು ಗ್ರಾಮಸ್ಥರು ಹೇಳುತ್ತಾರೆ, ಯಾಕೆಂದರೆ ಈ ಕೋಣ ಉಳಿದ ಗ್ರಾಮಸ್ಥರಿಗೆ ಏನೂ ಮಾಡುವುದಿಲ್ಲವಂತೆ. ಈ ಕಾರಣಕ್ಕಾಗಿಯೇ ಈ ಕೋಣಕ್ಕೆ ಐಾರೂ ಏನೂ ಮಾಡುವುದಿಲ್ಲ. ಹೀಗಾಗಿ ಈ ಕೋಣ ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡಿದರೂ ಸಹ ಅದನ್ನು ಓಡಿಸಲು ಗ್ರಾಮಸ್ಥರು ಹೆದರುತ್ತಿದ್ದಾರಂತೆ. ಗ್ರಾಮದಲ್ಲಿ ಯಾರನ್ನೂ ಕಾಡದ ಕೋಣ ಬೈದವರನ್ನು ಮಾತ್ರ ಬೆಂಬಿಡದೆ ಕಾಡುತ್ತಿರುವುದು ವಿಶೇಷ. ಗ್ರಾಮದಲ್ಲಿ ಕಂಟೆಮ್ಮ ದೇವಿಯ ಪವಾಡದಿಂದ ಕೋಣ ಈ ರೀತಿ ಮಾಡುತ್ತಿದೆ ಎನ್ನುತ್ತಿರುವ ಗ್ರಾಮಸ್ಥರು, ಅದರ ತಂಟೆಗೆ ಹೋದರೆ ಕೇಡಾಗಲಿದೆ ಎಂದು ಹೇಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement