ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ : ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ

ಬೆಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಸರ್ಕಾರಿ ಕಾಲೇಜು ಸೇರುವ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡುತ್ತಿದೆ. ಬಾಲಕಿಯರು ಇನ್ನು ಮುಂದೆ ಒಂದೇ ಒಂದು ರೂಪಾಯಿ ಶುಲ್ಕ ಭರಿಸಬೇಕಿಲ್ಲ, ವಿದ್ಯಾರ್ಥಿನಿಯರ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಬೇಕಿದೆ.

ಈವರೆಗೆ ಕಾಲೇಜಿಗೆ ದಾಖಲಾಗುವ ವೇಳೆ ವಿದ್ಯಾರ್ಥಿನಿಯರು ಶುಲ್ಕವೆಂದು 456 ರೂ. ಭರಿಸಿದ ನಂತರ ವಿದ್ಯಾರ್ಥಿನಿಯರ ಖಾತೆಗೆ ಆ ಹಣವನ್ನು ವಾಪಸ್ ಹಾಕಲಾಗುತ್ತಿತ್ತು. ಇದರಿಂದ ಹಲವರಿಗೆ

ವಿದ್ಯಾರ್ಥಿನಿಯರಿಗೆ ದಾಖಲಾತಿ ಸಮಯದಲ್ಲಿ ಹಣ ಕಟ್ಟುವುದು ತೊಂದರೆಯಾಗುತ್ತಿತ್ತು ಎಂಬ ಕಾರಣಕ್ಕೆ ಸರ್ಕಾರವೇ ಶುಲ್ಕ ಪಾವತಿಸಲು ನಿರ್ಧರಿಸಿದೆ. ಕಾಲೇಜಿನ ಪ್ರಾಂಶುಪಾಲರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇದರಿಂದ ದಾಖಲಾತಿ ವೇಳೆ ವಿದ್ಯಾರ್ಥಿನಿಯರು ಉಚಿತವಾಗಿ ಕಾಲೇಜಿಗೆ ದಾಖಲಾಗಬಹುದಾಗಿದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement