ಉದಯಪುರ ಹತ್ಯೆ: ಇಬ್ಬರು ಆರೋಪಿಗಳಿಗೆ ಜುಲೈ 13ರ ವರೆಗೆ ನ್ಯಾಯಾಂಗ ಬಂಧನ

ಉದಯಪುರ: ಟೈಲರ್ ಕನ್ಹಯ್ಯಾ ಲಾಲ್‌ ಅವರನ್ನು ಕೊಂದ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಜುಲೈ 13ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ಇಂದು ರಾಜಸ್ಥಾನದ ಉದಯಪುರ ಜಿಲ್ಲಾ ಸೆಷನ್ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಇಬ್ಬರು ಆರೋಪಿಗಳನ್ನು ಮುಖ ಮುಚ್ಚಿಕೊಂಡು ಪೊಲೀಸ್ ವ್ಯಾನ್‌ನಲ್ಲಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹಲವಾರು ವಕೀಲರು ಆವರಣದಲ್ಲಿ ಘೋಷಣೆಗಳನ್ನು ಕೂಗಲಾರಂಭಿಸಿದರು.ಸಂಜೆ ವೇಳೆಗೆ ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ವಕೀಲರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಮರ್ಡರ್ ವೆಪನ್ಸ್ ವಶಕ್ಕೆ
ಮತ್ತೊಂದು ಬೆಳವಣಿಗೆಯಲ್ಲಿ, ಉದಯಪುರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೋಪಿಯ ವಶದಿಂದ ಎರಡು ರಕ್ತದ ಕಲೆಯ ಆಯುಧಗಳನ್ನು ವಶಪಡಿಸಿಕೊಂಡಿದೆ. ಉದಯಪುರದ ಸಪೇಟಿಯಾ ಪ್ರದೇಶದಲ್ಲಿ ಆರೋಪಿಯ ಸಹಾಯಕನ ಕಚೇರಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಕನ್ಯಯ್ಯ ಲಾಲ್‌ ಅವರನ್ನು ಕೊಂದ ನಂತರ ಸಪೇಟಿಯಾದಲ್ಲಿರುವ ಶೋಯೆಬ್‌ನ ಕಚೇರಿಗೆ ಹೋಗಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement