ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧದ ವಿಚಾರಣೆ ಜುಲೈ 30ಕ್ಕೆ ಮುಂದೂಡಿಕೆ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ರೌಸ್​ ಅವೆನ್ಯೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಬೆಳಗ್ಗೆ ಹಾಜರಾಗಿದ್ದರು.
ಜೊತೆಗೆ ಸಂಸದ ಡಿ.ಕೆ.ಸುರೇಶ್​, ಸಚಿನ್​ ನಾರಾಯಾಣ್​, ಆಂಜನೇಯ, ಸುನೀಲ್​ ಶರ್ಮ, ರಾಜೇಂದ್ರ ಸಹ ಹಾಜರಾಗಿದ್ದರು. ಕೋರ್ಟ್‌
ಜಾಮೀನು ಅರ್ಜಿ ವಿಚಾರಣೆಯನ್ನ ಜುಲೈ 30ಕ್ಕೆ ಕೋರ್ಟ್ ಮುಂದೂಡಿದೆ.

;ಟ೧2018ರಲ್ಲಿ ದೆಹಲಿಯ ಸಪ್ತರ್​ ಜಂಗ್ ಫ್ಲ್ಯಾಟ್​​ನಲ್ಲಿ​ ಸಿಕ್ಕಿರುವ ಎಂಟೂವರೆ ಕೋಟಿ ರೂಪಾಯಿ ಹಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಡಿ.ಕೆ.ಶಿವಕುಮಾರ ಜಾಮೀನು ಪಡೆದಿದ್ದರು. ಈಗ ಹೊಸದಾಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನ ಜುಲೈ 30ಕ್ಕೆ ಕೋರ್ಟ್ ಮುಂದೂಡಿದೆ. ಜಾಂಇನಿಗೆ ಲಿಖಿತ ಆಕ್ಷೇಪಣೆಯನ್ನ ಸಲ್ಲಿಸಲು ಜುಲೈ 30ಕ್ಕೆ ಅರ್ಜಿ ಸಲ್ಲಿಸಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement