ಚಿರತೆಯೊಂದು ಮರದ ಮೇಲೆ ಮಂಗನ ಮರಿ ಬೇಟೆಯಾಡಿದ ಅಪರೂಪದ ದೃಶ್ಯದ ವೀಡಿಯೊ‌ ವೈರಲ್

ಚಿರತೆಯೊಂದು ಬೇಟೆಯಾಡುವ ಅಪರೂಪದ ದೃಶ್ಯ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಯಾಗಿದೆ. ಚಿರತೆ ಮಂಗನ ಮರಿಯನ್ನು ಬೇಟೆಯಾಡುತ್ತಿರುವುದು ಕಂಡುಬಂದಿದೆ. ಬೇಟೆಯ ವೀಡಿಯೊವನ್ನು ಪನ್ನಾ ಟೈಗರ್ ರಿಸರ್ವ್ನವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ.

ವೀಡಿಯೊ ಕ್ಲಿಪ್‌ನಲ್ಲಿ ಚಿರತೆಯೊಂದು ಕೋತಿ ಮರಿಯನ್ನು ಹಿಡಿಯಲು ಮರವನ್ನು ಏರುವುದನ್ನು ನೋಡಬಹುದು. ನಂತರ ಮಂಗನ ಮರಿ ಇರುವ ಇನ್ನೊಂದರ ಮರದ ಟೊಂಗೆಗೆ ಜಿಗಿಯುವುದನ್ನು ಕಾಣಬಹುದು. ಚಿರತೆ ಮಂಗನ ಮರಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಸಾಕಷ್ಟು ಎತ್ತರದಿಂದ ಬೀಳುವುದನ್ನು ಕಾಣಬಹುದು.

ಅಪರೂಪದ ದೃಶ್ಯ @pannatigerreserve. ಚಿರತೆಯೊಂದು ಮರದ ಮೇಲೆ ಜಿಗಿಯುವ ಮೂಲಕ ಮರಿ ಕೋತಿಯನ್ನು ಬೇಟೆಯಾಡುವುದನ್ನು ಕಾಣಬಹುದು” ಎಂದು ಟ್ವೀಟ್ ಮಾಡಿದೆ.
ಜೂನ್ 28 ರಂದು ಈ ವೀಡಿಯೊವನ್ನು ಹಂಚಿಕೊಂಡ ನಂತರ ವೈರಲ್‌ ಆಗಿದೆ.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement