13 ವರ್ಷದ ಮಂಗಳೂರಿನ ಬಾಲಕನ ‘ಕೋಮು ದಾಳಿ’ ಎಂಬ ಕಟ್ಟು ಕಥೆ

ಮಂಗಳೂರು: ಸುರತ್ಕಲ್‌ನ ಮದರಸಾದಿಂದ ಸೋಮವಾರ ಹಿಂದಿರುಗುತ್ತಿದ್ದ ವೇಳೆ ಅನ್ಯ ಧರ್ಮದ ಇಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ 13 ವರ್ಷದ ಬಾಲಕ, ನಂತರ ಮನೆ ಮತ್ತು ಶಾಲೆಯಲ್ಲಿ ಯಾರೂ ತನ್ನ ಗಮನಿಸದ ಕಾರಣ ಕಥೆಯನ್ನು ಹೆಣೆದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕಾಟಿಪಳ್ಳದ 6ನೇ ಬ್ಲಾಕ್‌ನಲ್ಲಿರುವ ತೌಯಿಬಾ ಮಸೀದಿಯ ಆರನೇ ತರಗತಿಯ ವಿದ್ಯಾರ್ಥಿ ಜೂನ್ 27ರಂದು ಮನೆಗೆ ಮರಳುತ್ತಿದ್ದ ವೇಳೆ ಕೇಸರಿ ಶಾಲು ಹಾಕಿಕೊಂಡು ದ್ವಿಚಕ್ರದಲ್ಲಿ ಬಂದಿರುವ ಆಗಂತುಕರಿಬ್ಬರು ತನ್ನನ್ನು ಎಳೆದಾಡಿ ಅಂಗಿ ಹರಿದು ಹಲ್ಲೆ ನಡೆಸಿದ್ದರು ಎಂದು ಬಾಲಕ ಆರೋಪ ಮಾಡಿದ್ದ. ಅನ್ಯ ಕೋಮಿನ ವ್ಯಕ್ತಿಗಳಾಗಿದ್ದರು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು‌. ಆದರೆ ಪೊಲೀಸ್ ತನಿಖೆಯಿಂದ ಆ ಬಾಲಕ ಕಟ್ಟುಕತೆ ಸೃಷ್ಟಿಸಿರೋದು ಬೆಳಕಿಗೆ ಬಂದಿದೆ.

ಬಾಲಕ ಪೆನ್ನು ಬಳಸಿ ತನ್ನ ಅಂಗಿಯನ್ನು ತಾನೇ ಹರಿದುಕೊಂಡಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಅವರ ಆರಂಭಿಕ ಹೇಳಿಕೆ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಮತ್ತು ಇತರ ಸಾಂದರ್ಭಿಕ ಪುರಾವೆಗಳ ಆಧಾರದ ಮೇಲೆ ಪೊಲೀಸರು ತಾಳೆ ಹಾಕಲು ಸಾಧ್ಯವಾಗದಿದ್ದಾಗ, ಗುರುವಾರ ಬಾಲಕನನ್ನು ಮತ್ತೆ ವಿಚಾರಣೆಗೆ ಕರೆಯಲಾಯಿತು. ಹುಡುಗ ಬಡ ಕುಟುಂಬದಿಂದ ಬಂದಿದ್ದು, ಅಧ್ಯಯನದಲ್ಲಿ ಹಿಂದುಳಿದಿದ್ದರಿಂದ ಕೀಳರಿಮೆಯಿಂದ ಬಳಲುತ್ತಿದ್ದಾನೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

“ಆ ಬಾಲಕನಿಗೆ ವೈಯಕ್ತಿಕ ಸಮಸ್ಯೆಗಳಿವೆ. ಓದುವುದರಲ್ಲಿ ಬಾಲಕ ಹಿಂದಿದ್ದಾನೆ, ಶಾಲೆಯಲ್ಲಿ ಯಾರೂ ಒಳ್ಳೆಯ ಸ್ನೇಹಿತರು ಇಲ್ಲದೇ ಇರುವುದು, ಸ್ನೇಹಿತರು ಯಾರೂ ಈತನನ್ನ ಹತ್ತಿರ ಸೇರಿಸದಿರುವುದು, ಮನೆಯಲ್ಲೂ ಬಡತನ ಕಷ್ಟಗಳಿವೆ. ತಂದೆ ಎಷ್ಟೇ ಕಷ್ಟಪಟ್ಟು ಓದಿಸಿದರೂ ಓದಲಿಕ್ಕೆ ಆಗುತ್ತಿಲ್ಲವೆಂಬ ಗೊಂದಲವಿದೆ. ಶಾಲೆಯಲ್ಲಿ ಮತ್ತು ಮನೆಯಲ್ಲಿ ಈತನ ಬಗ್ಗೆ ಗಮನ ಕಡಿಮೆಯಾಗಿದೆ. ಹೀಗಾಗಿ ಈ ರೀತಿಯಾಗಿ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ” ಎಂದು ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಹಾಗೂ ವೈದ್ಯರ ಮುಂದೆ ಪೊಲೀಸರು ಮತ್ತೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಪಾಲಕರು ಹಾಗೂ ಸಮಾಜದ ಮುಖಂಡರನ್ನು ಕರೆಸಿ ಸಮಸ್ಯೆ ಕುರಿತು ಚರ್ಚಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement