ಲೇಖಕಿ ಬಿ.ಟಿ ಲಲಿತಾ ನಾಯ್ಕ್‌ಗೆ ಕೊಲೆ ಬೆದರಿಕೆ ಪತ್ರ, ಸಿದ್ದರಾಮಯ್ಯ, ಎಚ್‌ಡಿಕೆ ಹೆಸರೂ ಇವೆ

ಬೆಂಗಳೂರು : ಸಾಮಾಜಿಕ ಹೋರಾಟಗಾರ್ತಿ ಹಾಗೂ ಲೇಖಕಿ ಬಿ.ಟಿ ಲಲಿತಾ ನಾಯಕ್‌ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ಪತ್ರದಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳಾದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಸೇರಿದಂತೆ ಅನೇಕರ ಹೆಸರನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಲಲಿತಾ ನಾಯಕ್‌ ಅವರ ಸಂಜಯ್ ನಗರದ ಮನೆಯ ವಿಳಾಸಕ್ಕೆ ಪತ್ರ ಬಂದಿದ್ದು ಪತ್ರದಲ್ಲಿ ಇನ್ನೂ ಹಲವಾರು ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿಗಳ ಹೆಸರನ್ನು ಬರೆಯಲಾಗಿದೆ. ಈ ಕುರಿತು ಲಲಿತಾ ನಾಯಕ್‌ ಅವರು ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೈ ಹಿಂದೂ ಹೆಸರಿನಲ್ಲಿ ಪತ್ರವನ್ನು ಬರೆಯಲಾಗಿದೆ.

ಪತ್ರದಲ್ಲೇನಿದೆ?
ಪಿಎಫ್‌ಐ , ಸಿಎಫ್‌ಐ, ಎಸ್‌ಡಿಪಿಐ ಪರ ಮಾತಾಡಬಾರದು. ಅವರ ಸಭೆ-ಸಮಾರಂಭಗಳಲ್ಲಿ ಭಾಗಿವಹಿಸಬಾರದು. ಪಠ್ಯದಲ್ಲಿ ದೇಶಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದ್ದಕ್ಕೆ ನಿಮಗೆಲ್ಲಾ ಭಯ. ನೀವು ನಿಜವಾದ ದೇಶದ್ರೋಹಿಗಳು. ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ? ಭಯೋತ್ಪಾದಕರು, ನಕ್ಸಲೈಟ್‌ಗಳು, ಮಾವೋವಾದಿಗಳು, ದೇಶದ್ರೋಹಿ ಮುಸ್ಲಿಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಪಿಎಫ್‌ಐ ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ? ನೀವು ಕ್ಷಮೆ ಕೇಳಬೇಕು. ನೀವು ಎಚ್ಚರಿಕೆಯಿಂದ ಇರಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಪತ್ರದ ಕೊನೆಯಲ್ಲಿ ʼಜೈಹಿಂದೂ ರಾಷ್ಟ್ರ, ಭಾರತ ಮಾತೆಗೆ ಜೈ, ಜೈ ಕರ್ನಾಟಕ ಮಾತೆ, ಸಹಿಷ್ಣು, ಹಿಂದೂ ಎಂದು ಬರೆದಿದೆ. ಅಲ್ಲದೆ, ರಾಜಾಜಿ ನಗರದ ಸೀಲ್ ಇದೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement