ಕರ್ನಾಟಕದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ-2022 ಕಿರೀಟ

ಮುಂಬೈ: ಭಾನುವಾರ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರಿನಲ್ಲಿ ನಡೆದ ವಿಎಲ್‌ಸಿಸಿ (VLCC) ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ( ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 (Femina Miss India World 2022) ಪ್ರಶಸ್ತಿ ಗೆದ್ದಿದ್ದಾರೆ.
ರಾಜಸ್ಥಾನದ ರೂಬಲ್ ಶೇಖಾವತ್, ಫೆಮಿನಾ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿದ್ದಾರೆ. ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾಣ್ ಅವರು ಫೆಮಿನಾ ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿದ್ದಾರೆ.

ಫೆಮಿನಾ ಮಿಸ್ ಇಂಡಿಯಾ 2021 ಮಾನಸ ವಾರಾಣಸಿ ಮಿಸ್ ಇಂಡಿಯಾ 2022 ಆಗಿ ಆಯ್ಕಯಾದ ಸಿನಿ ಶೆಟ್ಟಿಗೆ ಕಿರೀಟ ತೊಡಿಸಿದರು. ಸಿನಿ ಶೆಟ್ಟಿ ಕರ್ನಾಟಕ ಮೂಲದವರಾಗಿದ್ದು, ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಈಗ ಪ್ರತಿಷ್ಠಿತ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಿನಿ ಶೆಟ್ಟಿ, ರೂಬಲ್ ಶೇಖಾವತ್, ಶಿನಾತಾ ಚೌಹಾಣ್, ಪ್ರಜ್ಞಾ ಅಯ್ಯಗರಿ ಮತ್ತು ಗಾರ್ಗಿ ನಂದಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ. ನಟರಾದ ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ಮಲೈಕಾ ಅರೋರಾ, ವಿನ್ಯಾಸಕ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ, ನೃತ್ಯ ನಿರ್ದೇಶಕ ಶಿಯಾಮಕ್ ದಾವರ್ ಮತ್ತು ಮಾಜಿ ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್ ಫಿನಾಲೆಯ ತೀರ್ಪುಗಾರರ ಸಮಿತಿಯ ಭಾಗವಾಗಿದ್ದರು.
ಸಿನಿ ಶೆಟ್ಟಿ ಕರ್ನಾಟಕ ಮೂಲದವರು, ಮುಂಬೈನಲ್ಲಿ ಜನಿಸಿದರು. ಅವರು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಸಿನಿ ಶೆಟ್ಟಿ ನೃತ್ಯಗಾರ್ತಿ ಕೂಡ. ತಮ್ಮ ನಾಲ್ಕನೇ ವಯಸ್ಸಿನಿಂದ ಭರತನಾಟ್ಯ ಕಲಿಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement