ಹೊನ್ನಾವರ: ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಗಾಣಗಾಪುರದಲ್ಲಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಜ್ಞಾನೇಶ್ವರೀ ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ 37ನೇ ಚಾತುರ್ಮಾಸ್ಯ ವ್ರತ ಆಶಾಢ ಪೂರ್ಣಿಮೆ( ಗುರುಪೂರ್ಣಿಮೆ)ಯ ಜುಲೈ 13ರಿಂದ  ಶ್ರೀ ದತ್ತಾತ್ರೇಯ ಕ್ಷೇತ್ರವಾದ ಭೀಮಾ ಅಮರಜಾ ಸಂಗಮವಾದ ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ನಡೆಯಲಿದೆ.
ಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಜಗದ್ಗುರು ಶ್ರೀ ಶಂಕರಾಚಾರ್ಯರ ಮಠದಲ್ಲಿ ಆಶಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆ ದಿನವಾದ ಸೆಪ್ಟೆಂಬರ್‌ 10ರ ವರೆಗೆ 2ತಿಂಗಳ ಕಾಲ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಚಾತುರ್ಮಾಸ್ಯ ವ್ರತದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಳಳ್ಳಬೇಕು ಎಂದು ಕೋರಲಾಗಿದೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಹುಕ್ಕಾ, ಹುಕ್ಕಾ ಬಾರ್‌ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ನಿಮ್ಮ ಕಾಮೆಂಟ್ ಬರೆಯಿರಿ

advertisement