ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಳಗಾವಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳನ್ನು ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ರಾಮದುರ್ಗ ಪೊಲೀಸರು ಮುಳ್ಳೂರು ಘಾಟ್ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಘಟನೆ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಪರಾರಿಯಾಗುತ್ತಿದ್ದ ಇಬ್ಬರು ಕೊಲೆ ಆರೋಪಿಗಳಾದ ಧಾರವಾಡದ ಮಹಾಂತೇಶ ಶಿರೂರ ಮತ್ತು ಕಲಘಟಗಿಯ ಮಂಜುನಾಥ ಎಂಬವರನ್ನು ಮೊಬೈಲ್ ಲೋಕೇಷನ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಪರಾರಿಯಾಗದಂತೆ ರಸ್ತೆಗೆ ಅಡ್ಡಲಾಗಿ ಜೆಸಿಬಿಗಳು ನಿಲ್ಲಿಸಿದ್ದಾರೆ. ಯು ಟರ್ನ್‌ ಹೊಡೆದು ಹೋಗದಂತೆ ತಡೆಯಲು ತಕ್ಷಣವೇ ಟ್ರ್ಯಾಕ್ಟರ್‌ ತಂದು ನಿಲ್ಲಿಸಿದರು. ಆರೋಪಿಗಳು ಕಾರಿಂದಿಳಿದು ಓಡಲು ಪ್ರಶ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಸರ್ವಿಸ್ ರಿವಾಲ್ವಾರ್ ಹಿಡಿದು ಶೂಟ್‌ ಮಾಡುವ ಎಚ್ಚರಿಕೆ ನೀಡಿದ ನಂತರ ಆರೋಪಿಗಳಿಗೆ ಪರಾರಿಯಾಗಲು ಬೇರೆದಾರಿಯೇ ಇರಲಿಲ್ಲ. ನಂತರ ಪೊಲೀಸರು ಅವರನ್ನು ಬಂಧಿಸಿದರು.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement