ಭಾರಿ ಮಳೆ ಮುನ್ಸೂಚನೆ : ಉತ್ತರ ಕನ್ನಡ ಜಿಲ್ಲಾ ಶಾಲಾ- ಕಾಲೇಜುಗಳಿಗೆ ನಾಳೆಯೂ ರಜೆ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜುಲೈ 7ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯನೈಸರ್ಗಿಕ ವಿಪತ್ತು ನಿರ್ವಹಣಾ ಸಮಿತಿಯು ಮುನ್ಸೂಚನೆ ನೀಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 7ರಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಲಾಗಿದೆ.
ಮಂಗಳವಾರ ಮತ್ತು ಬುಧವಾರವೂ ರಜೆ ನೀಡಲಾಗಿತ್ತು. ರಾಜ್ಯನೈಸರ್ಗಿಕ ವಿಪತ್ತು ನಿರ್ವಹಣಾ ಸಮಿತಿಯು ಮುನ್ಸೂಚನೆ
ಜುಲೈ 7ರ ಬೆಳಿಗ್ಗೆ 8:30ರಿಂದ  ಜುಲೈ 8ರಂದು 8:30ರ ವರೆಗೆ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಿ ಭಾರೀ ಮಳೆಯಾಗುವ ಮುನ್ಸೂನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ನಿರ್ಧಾರ ಕೈಗೊಂಡಿದೆ.
ಬುಧವಾರ ಜಿಲ್ಲೆಯಲ್ಲಿ ಮಂಗಳವಾರಷ್ಟು ಮಳೆಯ ಅಬ್ಬರವಿರಲಿಲ್ಲ, ಕಡಿಮೆಯಾಗಿತ್ತು. ಭಟ್ಕಳದ ಶಿರಾಲಿಯಲ್ಲಿ ಮನೆಯೊಂದರ ಮಣ್ಣಿನ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ. ಹೊನ್ನಾವರ ತಾಲೂಕಿನ ಎರಡು ಕಡೆ ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದ ವರದಿಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement