ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಲೀನಾ ಮಣಿಮೇಕಲೈ ‘ಕಾಳಿ’ ಪೋಸ್ಟರ್ ಟ್ವೀಟ್ ತಡೆಹಿಡಿದ ಟ್ವಿಟ್ಟರ್‌

ನವದೆಹಲಿ: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ಸಾಕ್ಷ್ಯಚಿತ್ರ ‘ಕಾಳಿ’ ಕುರಿತು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಟ್ವೀಟ್ ಅನ್ನು ಹಿಂತೆಗೆದುಕೊಂಡಿದೆ.
ಇದರಲ್ಲಿ ಅತ್ಯಂತ ಪೂಜ್ಯ ದೇವತೆ ಕಾಳಿ ಧೂಮಪಾನ ಮಾಡುವುದನ್ನು ಮತ್ತು LGTBQ ಧ್ವಜವನ್ನು ಹಿಡಿದಿರುವ ಪೋಸ್ಟರ್ ಅನ್ನು ಒಳಗೊಂಡಿದೆ.
ಕಾಳಿ ದೇವಿಯ ತಪ್ಪು ನಿರೂಪಣೆಯು ಪ್ರಪಂಚದಾದ್ಯಂತದ ಹಿಂದೂ ಸಮುದಾಯದಿಂದ ತೀವ್ರ ಆಕ್ರೋಶ ಎದುರಿಸಿತು.
ಸರ್ಕಾರದ ಕೋರಿಕೆಯ ಮೇರೆಗೆ ಟ್ವಿಟ್ಟರ್ ಮಣಿಮೇಕಲೈ ಅವರ ಟ್ವೀಟ್ ಅನ್ನು ತಡೆಹಿಡಿದಿದೆ, ಅದು ‘ಅಂಡರ್ ದಿ ಟೆಂಟ್’ ಯೋಜನೆಯ ಭಾಗವಾಗಿ ಟೊರೊಂಟೊದ ಆಗಾ ಖಾನ್ ಮ್ಯೂಸಿಯಂನಲ್ಲಿ ತನ್ನ ಚಲನಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಿಸಿತು.

ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್, ಹಿಂದೂ ದೇವರುಗಳ ‘ಅಗೌರವದ ಚಿತ್ರಣ’ದ ಬಗ್ಗೆ ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ‘ಪ್ರಚೋದನಕಾರಿ ವಸ್ತುಗಳನ್ನು’ ತೆಗೆದುಹಾಕುವಂತೆ ಕೆನಡಾದ ಅಧಿಕಾರಿಗಳಿಗೆ ಒತ್ತಾಯಿಸಿದ ನಂತರ ಈ ಚಿಲನ ಚಿತ್ರದ ಪ್ರದರ್ಶನ ರದ್ದುಗೊಳಿಸಿವುದಾಗಿ ಆಗಾ ಖಾನ್ ಮ್ಯೂಸಿಯಂ ಹೇಳಿದೆ ಹಾಗೂ “ಅಚಾತುರ್ಯದಿಂದ ಅಪರಾಧ” ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ.ವಿವಾದದಲ್ಲಿ ಸಿಲುಕಿದ ಚಲನಚಿತ್ರವು ‘ಅಂಡರ್ ದಿ ಟೆಂಟ್’ ಯೋಜನೆಯ 18 ಕಿರು ವೀಡಿಯೊಗಳ ಭಾಗವಾಗಿತ್ತು.
ಮಂಗಳವಾರ, ದೆಹಲಿ ಪೊಲೀಸರು ಮತ್ತು ಉತ್ತರ ಪ್ರದೇಶ ಪೊಲೀಸರು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement