ಹೊಸ ಒಮಿಕ್ರಾನ್ ಉಪ-ರೂಪಾಂತರ BA.2.75 ಬಗ್ಗೆ ಕಾಳಜಿಯ ನಡುವೆ ಭಾರತದಲ್ಲಿ ಹೊಸದಾಗಿ 18,000ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,930 ಹೊಸ ಪ್ರಕರಣಗಳುಮತ್ತು 35 ಸಾವುಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 1,19,457 ಪ್ರಕರಣಗಳು ಏರಿಕೆ ಕಂಡಿದೆ.
ಇದೇವೇಳೆ 14,650 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೈನಂದಿನ ಸಕಾರಾತ್ಮಕತೆಯ ದರವು 4.32% ಕ್ಕೆ ಹೆಚ್ಚಾಗಿದೆ. ಬುಧವಾರಕ್ಕೆ ಹೋಲಿಸಿದರೆ ಭಾರತದ ದೈನಂದಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಸಕಾರಾತ್ಮಕತೆಯ ದರವು 3.56% ರಷ್ಟಿದೆ. ಸಕ್ರಿಯ ಕೋವಿಡ್‌ ಪ್ರಕರಣಗಳು 1,15,212 ರಿಂದ 1,19,457 ಕ್ಕೆ ಏರಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರವು 3.86% ರಷ್ಟಿದೆ. ತಾಜಾ ಸಾವಿನ ಸೇರ್ಪಡೆಯ ನಂತರ ಭಾರತದ ಒಟ್ಟು ಸಾವಿನ ಸಂಖ್ಯೆ 5,25,305 ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.26% ರಷ್ಟಿದ್ದರೆ, ರಾಷ್ಟ್ರೀಯ ಕೋವಿಡ್‌-19 ಚೇತರಿಕೆ ದರವು 98.53%ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಂತಹ ದೇಶಗಳಲ್ಲಿ ಹೊಸ ಕೋವಿಡ್‌-19 ಒಮಿಕ್ರಾನ್‌ ಉಪ-ವೇರಿಯಂಟ್ BA.2.75 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಇದು ಪತ್ತೆಯಾಗಿದೆ ಎಂದು ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೊರೊನಾ ಪ್ರಕರಣಗಳಲ್ಲಿ ಸುಮಾರು 30% ಹೆಚ್ಚಳ ಕಂಡುಬಂದಿದೆ. ಎಂದು ಘೆಬ್ರೆಯೆಸಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದಂತೆ.
ಯುರೋಪ್ ಮತ್ತು ಅಮೆರಿಕಾದಲ್ಲಿ, BA.4 ಮತ್ತು BA.5 ಅಲೆಗಳನ್ನು ಚಾಲನೆ ಮಾಡುತ್ತಿವೆ. ಭಾರತದಂತಹ ದೇಶಗಳಲ್ಲಿ BA.2.75 ರ ಹೊಸ ಉಪ-ವಂಶಾವಳಿಯನ್ನು ಸಹ ಪತ್ತೆಹಚ್ಚಲಾಗಿದೆ, ಅದನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಸಂಭಾವ್ಯ ಒಮಿಕ್ರಾನ್‌ ಉಪ-ವ್ಯತ್ಯಯ BA.2.75 ಹೊರಹೊಮ್ಮುವಿಕೆಯ ಕುರಿತು, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು, BA.2.75 ಎಂದು ಕರೆಯಲ್ಪಡುವ ಒಂದು ಉಪ-ವ್ಯತ್ಯಯದ ಹೊರಹೊಮ್ಮುವಿಕೆ ಕಂಡುಬಂದಿದೆ.ಮೊದಲು ಭಾರತದಿಂದ ವರದಿಯಾಗಿದೆ ಮತ್ತು ನಂತರ ಸುಮಾರು 10 ಇತರ ದೇಶಗಳಿಂ ವರದಿಯಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement