ನೈನಿತಾಲ್‌ನಲ್ಲಿ ಕಾರು ನದಿಗೆ ಬಿದ್ದು 9 ಸಾವು, ಇಬ್ಬರ ರಕ್ಷಣೆ

ಡೆಹ್ರಾಡೂನ್‌: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಎರ್ಟಿಗಾ ಕಾರು ನದಿಗೆ ಬಿದ್ದ ಪರಿಣಾಮ ಒಂಬತ್ತು ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.
ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು, ಅವರಲ್ಲಿ ಒಬ್ಬ ಹೆಣ್ಣು ಮಗು ಕೂಡ ಇತ್ತು ಎಂದು ಹೇಳಲಾಗಿದೆ. ಉತ್ತರಾಖಂಡ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಮತ್ತು ಅಗ್ನಿಶಾಮಕ ತಂಡವು ಸ್ಥಳಕ್ಕೆ ಧಾವಿಸಿದೆ. ವರದಿಯ ಪ್ರಕಾರ, ಮೃತರೆಲ್ಲರೂ ಪಂಜಾಬ್ ಮೂಲದವರು.
11 ಪ್ರಯಾಣಿಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. 9 ಜನರ ಸಾವನ್ನು ಆಡಳಿತ ದೃಢಪಡಿಸಿದೆ. ರಾಮನಗರ ಕೋಟ್‌ದ್ವಾರ ರಸ್ತೆಯಲ್ಲಿರುವ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಧೇಲಾ ವಲಯದಲ್ಲಿ ಈ ಅಪಘಾತ ಸಂಭವಿಸಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಎರ್ಟಿಗಾ ಬೆಳಿಗ್ಗೆ 5 ಗಂಟೆಗೆ ಕಾರ್ಬೆಟ್ ಕಡೆಗೆ ಹೋಗುತ್ತಿತ್ತು. ವೇಗವಾಗಿ ಬಂದ ಕಾರನ್ನು ನಿಲ್ಲಿಸಲು ಯತ್ನಿಸಿದರೂ ನಿಲ್ಲಿಸಲಿಲ್ಲ. ನಂತರ ಧೇಲಾ ಗ್ರಾಮದ ನದಿಯಲ್ಲಿ ಬಲವಾದ ಪ್ರವಾಹದಿಂದಾಗಿ ಹರಿಯುವ ನೀರಿನಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ.

ಕುಮಾವೂನ್ ರೇಂಜ್ ಡಿಐಜಿ ನಿಲೇಶ್ ಆನಂದ್ ಭರ್ನೆ ಅವರ ಹೇಳಿಕೆಯ ಪ್ರಕಾರ, “ಎಲ್ಲಾ ಮೃತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಜೀವಂತವಾಗಿ ರಕ್ಷಿಸಲ್ಪಟ್ಟ ಹುಡುಗಿಯನ್ನು ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನದಿಗೆ ಸೇತುವೆ ನಿರ್ಮಿಸುವ ಕುರಿತು ಆಡಳಿತದಲ್ಲಿ ಚರ್ಚೆ ನಡೆದಿದ್ದು, ಈ ಹಿಂದೆಯೂ ಇಲ್ಲಿ ಇಂತಹ ಅವಘಡಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಮನಗರದ ಧೇಲಾ ನದಿಯಲ್ಲಿ ವಾಹನ ಕೊಚ್ಚಿಹೋಗಿ 9 ಮಂದಿ ಸಾವಿಗೀಡಾದ ಕಾರು ಅಪಘಾತದ ದುಃಖದ ಸುದ್ದಿ ನನಗೆ ಬಂದಿದೆ. ಅಗಲಿದ ಆತ್ಮಗಳಿಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತರ ಕುಟುಂಬ ಸದಸ್ಯರೊಂದಿಗೆ ನನ್ನ ಸಂತಾಪವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement