ಮೇಘ ಸ್ಫೋಟದಿಂದ ಅಮರನಾಥ ಯಾತ್ರೆಯಲ್ಲಿ ದುರಂತ: ಬಂಟ್ವಾಳದ 30 ಜನರ ತಂಡ ಸುರಕ್ಷಿತ

ಮಂಗಳೂರು: ಅಮರನಾಥದಲ್ಲಿ ನಡೆದ ಮೇಘಸ್ಪೋಟದಲ್ಲಿ ೧೬ ಜನ ಮೃಯಪಟ್ಟು ೪೦ಕ್ಕೂ ಹೆಚ್ಚು ಜನ ನಾಪತ್ತೆಯಾದ ಘಟನೆಯ ನಂತರ ಕರ್ನಾಟಕ ಈಗ ಸಹಾಯವಾಣಿ ಆರಂಭಿಸಿದೆ. ಈಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಘಟನೆ ನಡೆದ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ‌ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿಯವರು ಯಾತ್ರಿ ಗಳ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. 28 ಕಿಮೀ ಸಂಚರಿಸಿದರೆ ನಾವು ಅಮರನಾಥ ಗುಹೆ ಸ್ಥಳಕ್ಕೆ ತಲುಪುತ್ತೇವೆ, ಇಲ್ಲಿ ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ, ನಾಳೆ ಬೆಳಿಗ್ಗೆ ಅಮರನಾಥ ದಲ್ಲಿ‌ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದು ಯಾತ್ರಾ ತಂಡದ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5:30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿ ಭಾರೀ ಪ್ರಮಾಣದ ಪ್ರವಾಹ ಭಕ್ತರು ವಾಸ್ತವ್ಯ ಹೂಡಿದ್ದ ಟೆಂಟ್‌ಗಳು ಮತ್ತು ಸಮುದಾಯ ಅಡುಗೆ ನೀರಿನಲ್ಲಿ ಕೊಚ್ಚಿ ಹೋಗಿದೆ, ಜೀವಹಾನಿ ಸಂಭವಿಸಿದೆ. ಟ್ಟು ೧೫ ಸಾವಿರಕ್ಕೂ ಹೆಚ್ಚುಜನರನ್ನು ಸ್ಥಳಾಂತರಿಸಲಾಗಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೇತೃತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರೆಣೆ ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement