ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಮರಕ್ಕೆ ಸಿದ್ಧರಾಗುವ ಪ್ರಯತ್ನಗಳ ಭಾಗವಾಗಿ ಕಾಂಗ್ರೆಸ್ ಶನಿವಾರ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಪಕ್ಷದ ರಾಜ್ಯದ ಹಲವು ನಾಯಕರು ಇದ್ದಾರೆ. ಹಾಗೂ ಪಕ್ಷ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ. ಅವರೊಂದಿಗೆ ಐವರು ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸುರ್ಜೇವಾಲಾ ಸಂಚಾಲಕರಾಗಿ 22 ಸದಸ್ಯರ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಿದ್ದಾರೆ ಮತ್ತು ಪಿಸಿಸಿ ಮುಖ್ಯಸ್ಥ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಂ ವೀರಪ್ಪ ಮೊಯ್ಲಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್, ದಿನೇಶ್ ಗುಂಡೂರಾವ್ , ಮಾರ್ಗರೇಟ್ ಆಳ್ವ, ಡಿ ಕೆ ಸುರೇಶ್ ಮತ್ತು ಪಕ್ಷದ ಕಾರ್ಯಪಡೆ ಸದಸ್ಯ ಸುನಿಲ್ ಕಾನುಗೋಲು ಈ ಸಮಿತಿ ಸದಸ್ಯರು.
ಸೋನಿಯಾ ಗಾಂಧಿಯವರು ತಕ್ಷಣವೇ ಜಾರಿಗೆ ಬರುವಂತೆ ಕರ್ನಾಟಕದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರೊಂದಿಗೆ ಐವರು ಎಐಸಿಸಿ ಕಾರ್ಯದರ್ಶಿಗಳನ್ನು ನೇಮಿಸಿದರು. ಶಾಸಕರಾದ ಡಿ. ಶ್ರೀಧರ್ ಬಾಬು, ಪಿ.ಸಿ.ವಿಷ್ಣುನಾಥ್, ರೋಜಿ ಎಂ ಜಾನ್ ಹಾಗೂ ಮಯೂರ ಎಸ್ ಜಯಕುಮಾರ್ ಮತ್ತು ಅಭಿಷೇಕ್ ದತ್ ಅವರನ್ನು ಸುರ್ಜೆವಾಲಾಗೆ ಕಾರ್ಯದರ್ಶಿಗಳಾಗಿ ಹೆಸರಿಸಲಾಗಿದೆ.
ಕುಲದೀಪ್ ರಾಯ್ ಶರ್ಮಾ ಮತ್ತು ರಮೀಂದರ್ ಸಿಂಗ್ ಅವ್ಲಾ ಅವರನ್ನು ಎಐಸಿಸಿ ಕಾರ್ಯದರ್ಶಿಗಳ ಪ್ರಸ್ತುತ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ಐದು ವರ್ಷಗಳ ನಿಗದಿತ ಅವಧಿಯ ಪ್ರಕಾರ, ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ