ನೂತನ ಸಂಸತ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ನೂತನ ಸಂಸತ್ ಭವನದ ಛಾವಣಿಯ ಮೇಲೆ ಹಾಕಲಾಗಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು.
ಲಾಂಛನವು ಒಟ್ಟು 9,500 ಕೆಜಿ ತೂಕದ ಕಂಚಿನಿಂದ ಮಾಡಲ್ಪಟ್ಟಿದೆ ಮತ್ತು 6.5 ಮೀಟರ್ ಎತ್ತರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನ ನೂತನ ಕಟ್ಟಡದ ಕೇಂದ್ರ ದ್ವಾರದ ಮೇಲ್ಭಾಗದಲ್ಲಿ ಇದನ್ನು ಹಾಕಲಾಗಿದೆ ಮತ್ತು ಲಾಂಛನವನ್ನು ಬೆಂಬಲಿಸಲು ಸುಮಾರು 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಹೊಸ ಸಂಸತ್ತಿನ ನಿರ್ಮಾಣದಲ್ಲಿ ತೊಡಗಿರುವ ಕಾರ್ಯಕರ್ತರೊಂದಿಗೆ ಮೋದಿ ಸಂವಾದ ನಡೆಸಿದರು.
ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಕೂಡ್ರಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯು ಕ್ಲೇ ಮಾಡೆಲಿಂಗ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ಎಂಟು ವಿಭಿನ್ನ ಹಂತದ ತಯಾರಿಕೆಯ ಮೂಲಕ ಸಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement