ಬೈಲಹೊಂಗಲದಲ್ಲಿ ಶೂಟೌಟ್‌ : ಶಿವರಂಜನ್ ಬೋಳನ್ನವರ ಮೇಲೆ ದಾಳಿಗೆ ಯತ್ನ

ಬೈಲಹೊಂಗಲ : ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಶೂಟೌಟ್ ನಡೆದಿದೆ.
ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ಮೇಲೆ ಫೈರಿಂಗ್ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಬಂದು ಅವರ ಮೇಲೆ ಎರಡು ಸುತ್ತು ಗುಂಡು ಹಾರಿಸಲಾಗಿದೆ. ರಾತ್ರಿ ೮ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದ್ದು, ಅದರಲ್ಲಿ ಅವರ ಸಂಬಂಧಿಯೂ ಒಬ್ಬರು ಇದ್ದು, ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಯಾರಿಗೂ ಗಾಯವಾಗಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ , ಬೈಲಹೊಂಗಲ ಡಿಎಸ್ಪಿ, ಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಫೈರಿಂಗ್‌ಗೆ ನಿಖರವಾದ ಕಾರಣ‌ ತಿಳಿದು ಬಂದಿಲ್ಲ. ಘಟನೆಗೆ ಕಾರಣರಾದವರ ಪತ್ತೆಗೆ ಪೊಲೀಸರ ತಂಡ ರಚನೆ ಮಾಡಲಾಗಿದೆ.‌ ಶಿವರಂಜನ್ ಅವರು ಅಮೃತಸಿಂಧು ಚಲನಚಿತ್ರದಲ್ಲಿ ನಟಿಸಿದ್ದರು. ಜೊತೆಗೆ ಕನ್ನಡ ಹೋರಾಟ ಮತ್ತು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement