10 ವರ್ಷದ ಬಾಲಕನ ನುಂಗಿದೆ ಎಂದು ಮೊಸಳೆ ಸೆರೆಹಿಡಿದು ಹೊಟ್ಟೆ ಸೀಳಲು ಮುಂದಾದ ಗ್ರಾಮಸ್ಥರು…ಬಾಲಕನ ಶವ ಸಿಕ್ಕಿದ್ದು ಮಾತ್ರ ಬೇರೆಡೆಗೆ

ಶಿಯೋಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ ಎಂದು ನಂಬಿದ ಗ್ರಾಮದ ನಿವಾಸಿಗಳು ಮೊಸಳೆಯನ್ನು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ರಿಜೆಂತಾ ಗ್ರಾಮದ ನಿವಾಸಿಗಳು ಸೆರೆ ಹಿಡಿದಿದ್ದ ಮೊಸಳೆಯನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆಯ ತಂಡ ರಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಅತಾರ್ ಸಿಂಗ್ ಎಂಬ ಬಾಲಕನನ್ನು ಎಳೆದುಕೊಂಡು ಹೋಗುವುದನ್ನು ಜನರು ನೋಡಿದ್ದಾರೆ ಎಂದು ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್‌ವೀರ್ ಸಿಂಗ್ ತೋಮರ್ ಹೇಳಿದ್ದಾರೆ.

ನಂತರ ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಜಮಾಯಿಸಿ ಬಲೆಯನ್ನು ಬಳಸಿ ಮೊಸಳೆಯನ್ನು ಸೆರೆಹಿಡಿದರು, ಬಾಲಕ ಇನ್ನೂ ಮೊಸಳೆಯ ಹೊಟ್ಟೆಯಲ್ಲಿ ಜೀವಂತವಾಗಿದ್ದಾನೆ ಎಂದು ನಂಬಿದ ಕೆಲವು ಗ್ರಾಮಸ್ಥರು ಮೊಸಳೆಯ ಹೊಟ್ಟೆಯನ್ನು ಸೀಳಲು ಬಯಸಿದ್ದರು ಎಂದು ಹೇಳಿದರು.
ಆದರೆ, ಮೊಸಳೆಯ ಹೊಟ್ಟೆಯಲ್ಲಿ ಮಗು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಹೇಳಿ ನದಿಯಲ್ಲಿ ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಿದರು. ಹುಡುಕಾಟದ ನಂತರ, ಮಂಗಳವಾರ ಬೆಳಿಗ್ಗೆ ಬಾಲಕನ ದೇಹವನ್ನು ನದಿಯಿಂದ ಹೊರಕ್ಕೆ ತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಯ ನಂತರ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement