ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ, ಭೇಟಿಯಾಗಿಲ್ಲ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

ನವದೆಹಲಿ: ತಾನು ಭಾರತಕ್ಕೆ ಬಂದು ಗೂಢಾಚಾರಿಕೆ ನಡೆಸಿದ್ದೆ ಎಂದು ಹೇಳಿರುವ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಭೇಟಿಯಾಗಿಲ್ಲ. ಭಯೋತ್ಪಾದನೆ ಕುರಿತಾದ ಚರ್ಚೆಗೆ ಭಾರತಕ್ಕೆ ಆಹ್ವಾನಿಸಿಲ್ಲ ಎಂಬುದಾಗಿ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಉಪರಾಷ್ಟ್ರಪತಿಯಾಗಿದ್ದಾಗ ಪಾಕಿಸ್ತಾನಿ ಪತ್ರಕರ್ತರೊಬ್ಬರನ್ನು ಭಾರತಕ್ಕೆ ಆಹ್ವಾನಿಸಿದ್ದರು ಎಂಬ ಆರೋಪಕ್ಕೆ ಬಿಜೆಪಿಗೆ ಹಮೀದ್ ಅನ್ಸಾರಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಅನ್ಸಾರಿ ಮೇಲೆ ಆರೋಪಗಳು ಕೇಳಿ ಬಂದ ನಂತರ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಮಾಧ್ಯಮಗಳು ಮತ್ತು ಬಿಜೆಪಿ ವಕ್ತಾರರು ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳಿನ ಕಂತೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನನ್ನ ಭೇಟಿ ಹಾಗೂ ಸಭೆಗಳ ಬಗ್ಗೆ ತಿಳಿದಿರುತ್ತದೆ. ಹಾಗಾಗಿ ನುಸ್ರತ್ ಮಿರ್ಜಾನನ್ನು ಭೇಟಿಯಾಗಿರುವ ಬಗ್ಗೆ ಕೇಳಿ ಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಹೇಳಿದ್ದಾರೆ.

“ನನ್ನ ವಿರುದ್ಧ ಸುಳ್ಳು ಹೇಳಲಾಗಿದೆ ಎಂದು ಹೇಳಿದ್ದಾರೆ ಮತ್ತು ಪಾಕಿಸ್ತಾನದ ಗೂಢಚಾರಿಕೆ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್‌ಐನೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಪಾಕಿಸ್ತಾನಿ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಭೇಟಿಯಾಗಿದ್ದನ್ನು ಅಥವಾ ಅವರನ್ನು ಆಹ್ವಾನಿಸಿಲ್ಲ, ಅವರು ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಭಾರತಕ್ಕೆ ಬಂದಿದ್ದಾಗ ಗೂಢಾಚಾರಿಕೆ ಮಾಡಿದ್ದರು. ಆಗ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿಯವರು ಮಿರ್ಜಾನನ್ನು ಭಾರತಕ್ಕೆ ಆಹ್ವಾನಿಸಿದ್ದರು. ಆಗ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳ ಹಂಚಿಕೆಯಾಗಿತ್ತು. ಯುಪಿಎ ಸರ್ಕಾರ ಇದ್ದಾಗ ಮಿರ್ಜಾ ಐದು ಬಾರಿ ಭಾರತಕ್ಕೆ ಬಂದಿದ್ದರು. ಭಾರತದಿಂದ ರಹಸ್ಯ ಮಾಹಿತಿಯನ್ನು ಕಲೆಹಾಕಿ ಪಾಕಿಸ್ತಾನದ ಐಎಸ್‍ಐಗೆ ನೀಡಿದ್ದರು ಎಂಬುದನ್ನು ನುಸ್ರತ್‌ ಮಿರ್ಜಾ ಅವರೇ ವರ್ಚುವಲ್‌ ಮೀಟಿಂಗ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಅನ್ಸಾರಿ ಸ್ಪಷ್ಟಪಡಿಸಬೇಕೆಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಒತ್ತಾಯಿಸಿದ್ದರು

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ಭಾರತದ ಉಪ ರಾಷ್ಟ್ರಪತಿಗಳಿಂದ ವಿದೇಶಿ ಗಣ್ಯರಿಗೆ ಆಹ್ವಾನವು ಸಾಮಾನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ಎಂಬುದು ತಿಳಿದಿರುವ ಸಂಗತಿಯಾಗಿದೆ. ನಾನು ಡಿಸೆಂಬರ್ 11, 2010 ರಂದು ಭಯೋತ್ಪಾದನೆ ಕುರಿತ ಸಮ್ಮೇಳನವನ್ನು ಉದ್ಘಾಟಿಸಿದ್ದೆ … ಸಾಮಾನ್ಯ ಅಭ್ಯಾಸದಲ್ಲಿ ಆಹ್ವಾನಿತರ ಪಟ್ಟಿಯನ್ನು ಸಂಘಟಕರು ಬರೆಯುತ್ತಿದ್ದರು. ನಾನು ಅವರನ್ನು ಎಂದಿಗೂ ಆಹ್ವಾನಿಸಿಲ್ಲ ಅಥವಾ ಭೇಟಿ ಮಾಡಿಲ್ಲ” ಎಂದು ಪಾಕಿಸ್ತಾನಿ ಪತ್ರಕರ್ತರನ್ನು ಉಲ್ಲೇಖಿಸಿ ಮಾಜಿ ಉಪರಾಷ್ಟ್ರಪತಿ ಹೇಳಿದರು.
ಇರಾನ್‌ಗೆ ರಾಯಭಾರಿಯಾಗಿ ನನ್ನ ಕೆಲಸವು ಎಲ್ಲಾ ಸಮಯದಲ್ಲೂ ಅಂದಿನ ಸರ್ಕಾರದ ತಿಳುವಳಿಕೆಯಲ್ಲಿತ್ತು. ”ಎಂದು ಅನ್ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement