ಅದ್ವೈತ-2022 ಸ್ಪರ್ಧೆ: ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಬಿಬಿಎ ತಂಡಕ್ಕೆ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ

ಅದ್ವೈತ-೨೦೨೨ ರ ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ
ಧಾರವಾಡ: ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಬಿ.ಎ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ಅದ್ವೈತ-2022 ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿಭಾಗದ ಮುಖ್ಯಸ್ಥರಾದ ನಾಗವೇಣಿ ಪುಡಕಲಕಟ್ಟಿ, ಐಟಿಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ವಿಭಾ ಮೋಗಳಿ, ಪ್ರೊ. ಅವಿನಾಶ್ ಹೊಳಿಹೊಸೂರ, ವಿದ್ಯಾರ್ಥಿಗಳಾದ ಅಮೃತ ತೊರಗಲ, ಪ್ರಸಾದ ದಿಬ್ಬದಮನಿ, ಮಿಥಾಲಿ ಮನೋಜ್, ಸೌಮ್ಯಶ್ರೀ ಪುರೋಹಿತ, ಜಾಗೃತಿ ಮಿಶ್ರಾ, ಅಜಿತ್ ಶೆಟ್ಟಿ, ವಿಜಯ್ ಪಾಟೀಲ, ಕಾರ್ತಿಕ ದಾನಪ್ಪಗೌಡರ, ಗೌತಮ ಕಲ್ಬುರ್ಗಿ, ಧೀರಜ ಎಲಿಗಾರ, ಸುಚಿತ್ ಪೂಜಾರ, ಆಕಾಶ್ ದೇಸಾಯಿ ಉಪಸ್ಥಿತರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement