ಕಾಶ್ಮೀರ: ಪೂಂಚ್‌ನ ಸೇನಾ ಶಿಬಿರದಲ್ಲಿ ಗುಂಡಿನ ಚಕಮಕಿ, ಇಬ್ಬರು ಸೈನಿಕರು ಸಾವು, ಇಬ್ಬರಿಗೆ ಗಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸೈನಿಕರ ಪರಸ್ಪರ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ಥಳೀಯ ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿರುವ ರಕ್ಷಣಾ ಮೂಲಗಳ ಪ್ರಕಾರ, ಕಲಕೋಟೆಯ ನಿವಾಸಿ ಇಮ್ರಾನ್ ಅಹ್ಮದ್ ಮತ್ತು ಮೆಂಧಾರ್‌ನ ಇಮ್ತಿಯಾಜ್ ಅಹ್ಮದ್ ಅವರ ಮಧ್ಯೆ ಕೆಲವು ವೈಯಕ್ತಿಕ ವಿಷಯಗಳ ಮೇಲೆ ತೀವ್ರ ವಾಗ್ವಾದದ ನಂತರ ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡುಗಳು ಮಖನ್ ಸಿಂಗ್ ಮತ್ತು ಖಲೀಲ್ ಅಹ್ಮದ್ ಎಂದು ಗುರುತಿಸಲಾದ ಇತರ ಸೈನಿಕರಿಗೂ ತಗುಲಿ, ಅವರು ತೀವ್ರವಾಗಿ ಗಾಯಗೊಂಡರು.

ಗಾಯಾಳುಗಳನ್ನು ಉಧಂಪುರದ ಮಿಲಿಟರಿ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದ್ದು, ಅವರಲ್ಲಿ ಗಾಯಗೊಂಡ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಬ್ಬ ಯೋಧ ತನ್ನ ಸೇವಾ ಆಯುಧವಾದ AK-47 ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದನು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ನವೆಂಬರ್ 2021 ರಲ್ಲಿ, ಛತ್ತೀಸ್‌ಗಢದ ಸುಕ್ಮಾದಲ್ಲಿ ಜವಾನ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ನಂತರ ನಾಲ್ಕು ಸಿಆರ್‌ಪಿಎಫ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು ಮತ್ತು ಮೂವರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement