ಆದೇಶದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿದ ಸರ್ಕಾರ

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡಬಾರದೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದ ಆದೇಶದಲ್ಲಿ ವ್ಯಾಕರಣ ದೋಷ ಹೆಚ್ಚಿದ್ದರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಈಗ ಸರ್ಕಾರ ಮತ್ತೊಮ್ಮೆ ತಿದ್ದುಪಡಿ ಮಾಡಲು ಆದೇಶಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗೆಳು ವೀಡಿಯೊ ಚಿತ್ರೀಕರಣ ಹಾಗೂ ಫೋಟೋ ತೆಗೆಯುವಂತಿಲ್ಲ ಎಂದು ಶುಕ್ರವಾರ (ಜುಲೈ 15ರಂದು) ಆದೇಶವನ್ನು ಹೊರಡಿಸಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶವಾದ ಹಿನ್ನೆಲೆಯಲ್ಲಿ ಅದೇದಿನ ಮತ್ತೆ ಆದೇಶ ಹಿಂಪಡೆಯಿತು. ಆದರೆ ಅದೇಶವನ್ನು ಹಿಂಪಡೆದ ಪತ್ರದಲ್ಲಿ ವ್ಯಾಕರಣ ದೋಷಗಳು ಕಂಡುಬಂದಿತ್ತು.ಆದೇಶದಲ್ಲಿ ವ್ಯಾಕರಣ ದೋಷಗಳೇ ತುಂಬಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು.
ನಡಾವಳಿ – ನಡವಳಿ, ಪ್ರಸ್ತಾವನೆ – ಪ್ರಸತ್ತಾವನೆ, ಭಾಗ-1 – ಬಾಗ-1, ಕರ್ನಾಟಕ – ಕರ್ನಾಟಾ, ಮೇಲೆ – ಮೇಲೇ, ಆಡಳಿತ -ಆಡಳಿದ ಎಂದು ಆದೇಶದಲ್ಲಿ ತಪ್ಪುಗಳನ್ನು ಮಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಪದಗಳಲ್ಲಿ ತಪ್ಪಾಗಿದ್ದ ವ್ಯಾಕರಣ ದೋಷವನ್ನು ಸರಿಪಡಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement