ಐದಾರು ಸಾಲುಗಳ ಸರ್ಕಾರದ ಕನ್ನಡದ ಆದೇಶ ಪ್ರತಿಯಲ್ಲಿ ಎಷ್ಟೊಂದು ತಪ್ಪುಗಳು…!

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಸಾರ್ವಜನಿಕರು ಅಪ್ಪಿ ತಪ್ಪಿಯು ವೀಡಿಯೊ ಚಿತ್ರೀಕರಣ ಅಥವಾ ಫೋಟೋ ತೆಗೆಯಬಾರದೆಂಬ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ. ಆದರೆ ಆತುರದಲ್ಲಿ ಆದೇಶ ಪ್ರತಿಯಲ್ಲಿ ತಪ್ಪುಗಳೇ ಕಂಡುಬಂದಿವೆ.
ವೀಡಿಯೊ ಚಿತ್ರೀಕರಣ ಅಥವಾ ಫೋಟೋ ತೆಗೆಯಬಾರದೆಂಬ ಆದೇಶ ಹಿಂಪಡೆಯುವ ಪಡೆಯುವ ಬಗ್ಗೆ ಹೊರಡಿಸಲಾಗಿದ್ದ ಆದೇಶ ಪತ್ರದಲ್ಲಿ ಸಾಕಷ್ಟು ವ್ಯಾಕರಣ ದೋಷಗಳು ಕಂಡು ಬಂದಿವೆ.
ಶಬ್ದಗಳನ್ನು ತಪ್ಪುತಪ್ಪಾಗಿ ಟೈಪ್‌ ಮಾಡಲಾಗಿದೆ. ನಡಾವಳಿ – ನಡವಳಿ, ಪ್ರಸ್ತಾವನೆ – ಪ್ರಸತ್ತಾವನೆ, ಭಾಗ-1 – ಬಾಗ-1, ಮೇಲೆ – ಮೇಲೇ, ಕರ್ನಾಟಕ – ಕರ್ನಾಟಾ, ಆಡಳಿತ -ಆಡಳಿದ ಎಂದೆಲ್ಲ ತಪ್ಪು ತಪ್ಪಾಗಿ ಟೈಪ್‌ ಮಾಡಲಾಗಿದೆ.
ಒಂದು ಪುಟದ ನಾಲ್ಕೈದು ಸಾಲುಗಳ ಸುತ್ತೋಲೆಯಲ್ಲಿ 8 ಅಕ್ಷರ ದೋಷಗಳು ಪತ್ತೆಯಾಗಿವೆ. ತಪ್ಪುಗಳ ಸರಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement