ಕಲಬುರಗಿ: ಮಹಿಳಾ ಪಿಎಸ್‌ಐ ‌ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆ ಆರೋಪಿ ಮೇಲೆ ಫೈರಿಂಗ್‌

ಕಲಬುರಗಿ: ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಜಯಕುಮಾರ ಹಳ್ಳಿ ಎಂಬಾತನನ್ನು ಪಂಚನಾಮೆಗೆ ಕರೆದೊಯ್ದ ಸಂದರ್ಭದಲ್ಲಿ ಶಹಾಬಾದ್ ಪಿಎಸ್‌ಐ ಸುವರ್ಣಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಪೊಲೀಸರು ವಿಜಯಕುಮಾರನತ್ತ ಗುಂಡು ಹಾರಿಸಿದ್ದು, ಆತನಿಗೂ ಗಾಯಗಳಾಗಿವೆ. ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಗಿರೀಶ ಕಂಬಾನೂರ ಅವರನ್ನು ತಲ್ವಾರ್‌ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ರಾತ್ರಿ ಆರೋಪಿ ವಿಜಯಕುಮಾರ್ ಹಳ್ಳಿ ಹಾಗೂ ಇತರರನ್ನು ಬಂಧಿಸಲಾಗಿತ್ತು. ಶಹಾಬಾದ್ ಬಳಿಯ ತೊನಸನಹಳ್ಳಿ ಗ್ರಾಮದ ಬಳಿ ತಲ್ವಾರ್ ಹಾಗೂ ಬಂದೂಕು ಎಸೆದು ಹೋಗಿದ್ದ ಜಾಗದಲ್ಲಿ ಪಂಚನಾಮೆ ನಡೆಸಲು ಆರೋಪಿಗಳನ್ನು ಕರೆದೊಯ್ದಾಗ ತಲ್ವಾರ್‌ ಎಸೆದಿದ್ದ ಸ್ಥಳವನ್ನು ತೋರಿಸುವ ನಟನೆ ಮಾಡಿದ ವಿಜಯಕುಮಾರ್ ಹಳ್ಳಿ ಅದೇ ತಲ್ವಾರ್‌ನಿಂದ ಸುವರ್ಣಾ ಅವರ ಮೇಲೆ ದಾಳಿ ಮಾಡಿದ್ದಾನೆ. . ತಕ್ಷಣ ಎಚ್ಚೆತ್ತ ಸಿಪಿಐ ಪ್ರಕಾಶ್ ಯಾತನೂರ ವಿಜಯಕುಮಾರ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿ ವಿಜಯಕುಮಾರ ಎಡಗಾಲಿಗೆ ಗಾಯವಾಗಿದೆ. ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement