ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಹಂದಿ ಮಾಂಸ ಸೇವಿಸದಂತೆ ಸೂಚನೆ

ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.
ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಂದಿ ಪತ್ತೆಯಾದ ಸ್ಥಳದಿಂದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ನಾವು ಮೊದಲು 1 ಕಿಮೀ ವರೆಗಿನ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದೇವೆ. ನಿಯಮಗಳ ಪ್ರಕಾರ, ನಾವು ಸೋಂಕಿತ ಪ್ರದೇಶದಲ್ಲಿ ಎಲ್ಲಾ ಹಂದಿಗಳನ್ನು ಕೊಂದು ಹೂಳಿದ್ದೇವೆ. ಏಕಕಾಲದಲ್ಲಿ, ನಾವು ಇಡೀ ಪ್ರದೇಶವನ್ನು ಶುಚಿಗೊಳಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ತಜ್ಞರ ಪ್ರಕಾರ, ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಮತ್ತು ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಸಹ ಮನುಷ್ಯರಿಗೆ ಸೋಂಕು ಹರಡುವುದಿಲ್ಲ.
ಸರ್ಕಾರದ ಅಂಕಿಅಂಶಗಳ ಪ್ರಕಾರ, 2020 ರಿಂದ ಈ ವರ್ಷ ಜುಲೈ 11 ರವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಮೃತಪಟ್ಟಿವೆ, 1,181 ಹಂದಿಗಳನ್ನು ಕೊಲ್ಲಲಾಗಿದೆ.

ಆಫ್ರಿಕನ್ ಹಂದಿ ಜ್ವರದ ವಿರುದ್ಧ ಎಚ್ಚರಿಕೆ
ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಹಾಗೆಯೇ ಉತ್ತರಾಖಂಡ ಮತ್ತು ಬಿಹಾರಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಪ್ರಕರಣಗಳು ವರದಿಯಾಗಿವೆ.
ರೋಗವು ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಮತ್ತು ಯಾವುದೇ ಲಸಿಕೆ ಇಲ್ಲದಿರುವುದರಿಂದ, ಹಂದಿಮಾಂಸವನ್ನು ತಿನ್ನುವುದನ್ನು ತಪ್ಪಿಸುವಂತೆ ಸರ್ಕಾರವು ಒತ್ತಾಯಿಸಿದೆ.
ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆಯನ್ನು ಸಹ ಸೂಚಿಸಿದೆ, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸುತ್ತಾರೆ. ಎಲ್ಲಾ ರೋಗನಿರ್ಣಯ ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಹಂದಿಗಳು ಜ್ವರದಿಂದ ಸಾವಿಗೀಡಾದ ಬಗ್ಗೆ ನಿಗಾ ತೀವ್ರಗೊಳಿಸಲು ಮತ್ತು ವರದಿ ಮಾಡಲು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement