ಜೀನ್ಸ್‌ ತಂದ ಕುತ್ತು..: ಮದುವೆಯ ನಂತ್ರ ಜೀನ್ಸ್ ಧರಿಸುವಂತಿಲ್ಲ ಎಂದ ಗಂಡನನ್ನೇ ಹತ್ಯೆ ಮಾಡಿದ ಜಾರ್ಖಂಡ್ ಮಹಿಳೆ…!

ಜಮ್ತಾರಾ: ಜಾರ್ಖಂಡ್‌ನ ಜಮ್ತಾರಾದಲ್ಲಿ ಮದುವೆಯ ನಂತರ ಪತ್ನಿ ಜೀನ್ಸ್ ಧರಿಸುವುದು ಬೇಡ ಎಂದು ಗಂಡ ತಡೆದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಚಾಕುವಿನಿಂದ ಇರಿದು ಕೊಂದಿದ್ದಾಳೆ…! ಜಮ್ತಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ, ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾದ ಮಹಿಳೆ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ಅವಳು ಮನೆಗೆ ಹಿಂದಿರುಗಿದಾಗ, ದಂಪತಿ ಮಧ್ಯೆ ಅವಳ ಧರಿಸಿದ ಉಡುಪಿನ ಬಗ್ಗೆ ಮಾತಿನ ಚಕಮಕಿ ನಡೆಯಿತು ಮತ್ತು ಮದುವೆಯ ನಂತರ ನೀನು ಏಕೆ ಜೀನ್ಸ್ ಧರಿಸಿದೆ ಎಂದು ಗಂಡ ಪ್ರಶ್ನಿಸಿದ್ದಾನೆ.

ಗಂಡ ಈ ರೀತಿ ಪ್ರಶ್ನಿಸಿದ್ದು ನಂತರ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಕೋಪದ ಭರದಲ್ಲಿ ಪತ್ನಿ ಪುಷ್ಪಾ ತನ್ನ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಗಂಡ ತೀವ್ರವಾಗಿ ಗಾಯಗೊಂಡಿದ್ದಾನೆ. ಕುಟುಂಬ ಸದಸ್ಯರು ತಕ್ಷಣ ಅವರನ್ನು ಧನ್‌ಬಾದ್ ಪಿಎಂಸಿಎಚ್‌ಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ. ಮೃತನ ತಂದೆ ಕರ್ಣೇಶ್ವರ ತುಡು ಮಾತನಾಡಿ, ಜೀನ್ಸ್ ಪ್ಯಾಂಟ್ ಹಾಕುವ ವಿಚಾರದಲ್ಲಿ ಮಗ ಮತ್ತು ಸೊಸೆ ನಡುವೆ ಜಗಳವಾಗಿತ್ತು. ‘‘ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಕೊಲೆಯ ಆಯುಧವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.
ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಧನಬಾದ್‌ನಲ್ಲಿ ಚಿಕಿತ್ಸೆ ವೇಳೆ ವ್ಯಕ್ತಿ ಮೃತಪಟ್ಟಿದ್ದರಿಂದ ಧನ್‌ಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ತಾರಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement