ಖ್ಯಾತ ಹಿನ್ನೆಲೆ-ಗಜಲ್‌ ಗಾಯಕ ಭೂಪಿಂದರ್ ಸಿಂಗ್ ನಿಧನ

 ಮುಂಬೈ: ಹಿರಿಯ ಬಾಲಿವುಡ್‌ ಹಿನ್ನೆಲೆ ಗಾಯಕ ಹಾಗೂ ಖ್ಯಾತ ಗಜಲ್‌ ಗಾಯಕ ಭೂಪಿಂದರ್ ಸಿಂಗ್ (82 ವರ್ಷ ) ಸೋಮವಾರ ಸಂಜೆ ಮುಂಬೈನಲ್ಲಿ ನಿಧನರಾದರು ಎಂದು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಹೇಳಿದ್ದಾರೆ.
ಅವರು ಕೆಲವು ಸಮಯದಿಂದ ಮೂತ್ರದ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು” ಎಂದು ಪತ್ನಿ ಮಿತಾಲಿ ತಿಳಿಸಿದ್ದಾರೆ.
10 ದಿನಗಳ ಹಿಂದೆ ಭೂಪಿಂದರ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದೆ. ಭೂಪಿಂದರ್ ಅವರು ಸುಮಾರು 7.:30 ಗಂಟೆಗೆ ನಿಧನರಾದರು.

ಕೊಮೊರ್ಬಿಡಿಟೀಸ್ ಸಮಸ್ಯೆಯಿಂದ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
“ಮೌಸಮ್”, “ಸತ್ತೆ ಪೆ ಸತ್ತಾ”, “ಅಹಿಸ್ತಾ ಅಹಿಸ್ತಾ”, “ದೂರಿಯನ್”, “ಹಕೀಕತ್”, ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿನ ಸ್ಮರಣೀಯ ಹಾಡುಗಳಿಗಾಗಿ ಸಿಂಗ್ ಯಾವತ್ತಿಗೂ ನೆನಪಿನಲ್ಲಿ ಉಳಿಯುತ್ತಾರೆ. ಅವರು ಗಜಲ್‌ಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದರು.
ಅವರ ಕೆಲವು ಪ್ರಸಿದ್ಧ ಹಾಡುಗಳು “ಹೊಕೆ ಮಜ್ಬೂರ್ ಮುಜೆ, ಉಸ್ನೆ ಬುಲಾಯಾ ಹೋಗಾ”, (ಮೊಹಮ್ಮದ್ ರಫಿ, ತಲತ್ ಮೆಹಮೂದ್ ಮತ್ತು ಮನ್ನಾ ಡೇ ಅವರೊಂದಿಗೆ), “ದಿಲ್ ಧೂಂಧ್ತಾ ಹೈ”, “ದುಕಿ ಪೇ ದುಕಿ ಹೋ ಯಾ ಸತ್ತೆ ಪೆ ಸತ್ತಾ,” (ಬಹು ಗಾಯಕರು) ಮತ್ತು ಇನ್ನೂ ಅನೇಕ ಹಾಡುಗಳನ್ನು ಜನರು ಈಗಲೂ ಗುನುಗುನಿಸುತ್ತಾರೆ.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement