ರಾಂಚಿ: ಬುಧವಾರ (ಜುಲೈ 20) ಜಾರ್ಖಂಡ್‌ನ ರಾಂಚಿಯಲ್ಲಿ ವಾಹನ ತಪಾಸಣೆಯ ವೇಳೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಅವರನ್ನು ಪಿಕಪ್ ವ್ಯಾನ್ ಹಾಯಿಸಿ ಸಾಯಿಸಲಾಗಿದೆ. ಈ ಘಟನೆ ಬುಧವಾರ ನಸುಕಿನ ಜಾವ ತುಪುಡಾನಾ ಪ್ರದೇಶದಲ್ಲಿ ನಡೆದಿದೆ.
ಡಿಎಸ್‌ಪಿ ಶ್ರೇಣಿಯ ಹರಿಯಾಣ ಪೊಲೀಸ್ ಅಧಿಕಾರಿ ಸುರೇಂದ್ರ ಸಿಂಗ್ ಅವರನ್ನು ನುಹ್‌ನಲ್ಲಿ ಗಣಿಗಾರಿಕೆ ಮಾಫಿಯಾ ಇದೇ ರೀತಿ ಸಾಯಿಸಿದ ಒಂದು ದಿನದ ನಂತರ ಈ ಘಟನೆ ವರದಿಯಾಗಿದೆ.
ಪೊಲೀಸರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಬಂಧಿಸಿದ್ದಾರೆ ಮತ್ತು ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ.
ಸಂಧ್ಯಾ ಟೋಪ್ನೋ ಎಂಬ ಮಹಿಳಾ ಸಬ್ ಇನ್ಸ್‌ಪೆಕ್ಟರ್ ವಾಹನ ತಪಾಸಣೆ ವೇಳೆ ನಿನ್ನೆ ರಾತ್ರಿ ಕೊಲೆಗೀಡಾಗಿದ್ದಾರೆ. ಅವರನ್ನು ತುಪುಡಾನ ಓಪಿಯ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ರಾಂಚಿ ಎಸ್‌ಎಸ್‌ಪಿ ಕೌಶಲ್ ಕುಮಾರ್ ತಿಳಿಸಿದ್ದಾರೆ. .
ಜಾನುವಾರು ಕಳ್ಳಸಾಗಣೆದಾರರ ಚಲನವಲನದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು ಮತ್ತು ಆದ್ದರಿಂದ ಘಟನೆ ನಡೆದಾಗ ಚೆಕ್ ಪೋಸ್ಟ್‌ನಿಂದ ಹಾದುಹೋಗುವ ವಾಹನಗಳನ್ನು ಪರಿಶೀಲಿಸಲಾಗುತ್ತಿತ್ತು ಎಂದು ಎಸ್‌ಎಸ್‌ಪಿ ಕೌಶಲ್ ಕುಮಾರ್ ಹೇಳಿದ್ದಾರೆ.
ಡಿಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ಇದೇ ಮಾದರಿಯಲ್ಲಿ ಮಂಗಳವಾರ ನುಹ್‌ನ ಪಚ್‌ಗಾಂವ್ ಬಳಿ ಗಣಿ ಮಾಫಿಯಾ ಹತ್ಯೆ ಮಾಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ