ಜ್ಞಾನವಾಪಿ ಮಸೀದಿ ಅರ್ಜಿ: ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವರೆಗೆ ಕಾಯುವುದಾಗಿ ತಿಳಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ, ದಾವೆಯ ನಿರ್ವಹಣೆಯ ಕುರಿತು ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕಾಗಿ ಕಾಯುವುದಾಗಿ ಹೇಳಿದೆ. ಹಾಗೂ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಿದೆ.
ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಶೃಂಗಾರ್ ಗೌರಿ ಸ್ಥಲವನ್ನು ಪೂಜಿಸಲು ಅನುಮತಿ ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಮನವಿಯ ನಿರ್ವಹಣೆಯ ಕುರಿತು ವಾರಾಣಸಿ ನ್ಯಾಯಾಲಯವು ಗುರುವಾರ ವಾದವನ್ನು ಆಲಿಸಲಿದೆ. ಈ ಹಿಂದೆ, ಮಸೀದಿಯ ಸಂಕೀರ್ಣದಲ್ಲಿ ಶಿವಲಿಂಗವನ್ನು ಹೋಲುವ ರಚನೆಯು ಕಂಡುಬಂದಿದೆ. ಇದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಎಂದು ಮಸೀದಿ ಸಮಿತಿಯು ವಾದಿಸಿತು.

ನ್ಯಾಯಾಲಯದಿಂದ ನೇಮಕಗೊಂಡ ವಿಶೇಷ ಸಹಾಯಕ ಆಯುಕ್ತ ವಿಶಾಲ್ ಸಿಂಗ್ ಅವರು ಮೇ 19 ರಂದು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಜ್ಞಾನವಾಪಿ ಮಸೀದಿ ವೀಡಿಯೊ ಸಮೀಕ್ಷೆಯ ವರದಿಯ ಭಾಗವಾಗಿದೆ.
ಆಗಸ್ಟ್ 15, 1947 ರಂದು ಇದ್ದಂತೆ ಸೈಟಿನ ಧಾರ್ಮಿಕ ಸ್ವರೂಪವನ್ನು ಫ್ರೀಜ್ ಮಾಡುವ 1991 ರ ಪೂಜಾ ಸ್ಥಳಗಳ ಕಾಯಿದೆಯಿಂದ ನಿರ್ಬಂಧಿಸಲಾಗಿದೆ ಎಂಬ ಆಧಾರದ ಮೇಲೆ ಮಸೀದಿ ಪ್ಯಾನೆಲ್ ಫಿರ್ಯಾದಿಗಳು ಸಲ್ಲಿಸಿದ ಮೊಕದ್ದಮೆಯನ್ನು ಪ್ರಶ್ನಿಸಿದೆ.
ಹಿಂದೂ ಪರ ಅರ್ಜಿದಾರರಯ ಇಲ್ಲಿಯವರೆಗೆ 1991 ರ ಶಾಸನವು ತಮ್ಮ ಮೊಕದ್ದಮೆಯನ್ನು ತಡೆಯುವುದಿಲ್ಲ ಎಂದು ವಾದಿಸಿದ್ದಾರೆ ಮತ್ತು ಆಗಸ್ಟ್ 15, 1947 ರಂತೆ ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪವನ್ನು ಸಾಬೀತುಪಡಿಸಲು ಮತ್ತು ಸಾಕ್ಷ್ಯವನ್ನು ಪ್ರಸ್ತುತಪಡಿಸಲು ತಮ್ಮ ಮೊಕದ್ದಮೆ ಸಲ್ಲಿಸಲಾಗಿದೆ ಎಂದು ಎಂದು ಹೇಳಿದರು.
ಶಿವಲಿಂಗ ಪತ್ತೆಯಾದ ನಂತರ, ಮುಸ್ಲಿಂ ಸಮುದಾಯದ ಆರಾಧನೆಯ ಹಕ್ಕನ್ನು ನಿರ್ಬಂಧಿಸದೆ ಸಂಕೀರ್ಣದಲ್ಲಿರುವ ಪ್ರದೇಶವನ್ನು ರಕ್ಷಿಸಲು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನ್ನು ಸುಪ್ರೀಂ ಕೋರ್ಟ್ ಸೂಚಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement