ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ರುಂಡದೊಂದಿಗೆ ಠಾಣೆಗೆ ಬಂದ ಪಾಗಲ್ ಪ್ರೇಮಿ…!

ಬಳ್ಳಾರಿ: ಪಾಗಲ್ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹತ್ಯೆಯಾದ ಯುವತಿಯನ್ನು ನಿರ್ಮಲಾ(23) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಬೋಜರಾಜ ಎಂದು ಗುರುತಿಸಲಾಗಿದೆ. ಬಿಎಸ್‍ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆ ಇದ್ದ ಹಿನ್ನೆಲೆ ಓದಲು ಊರಿಗೆ ಬಂದಾಗ ಈ ದುರ್ಘಟನೆ ನಡೆದಿದೆ.

ಮೊದಲಿನಿಂದಲೂ ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಬೋಜರಾಜ ಕುಟುಂಸ್ಥರನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಆತ ಎರಡು ತಿಂಗಳ ಹಿಂದೆ ಬೇರೆ ಯುವತಿಯನ್ನು ಮದುವೆಯಾಗಿದ್ದ.
ಆದರೆ ನಿರ್ಮಲಾ ಊರಿಗೆ ಬಂದಿರುವ ವಿಚಾರ ತಿಳಿದ ಆರೋಪಿ ಕೋಪಗೊಂಡಿದ್ದ. ನಂತರ ಸಮಯ ಸಾಧಿಸಿ ಮಚ್ಚಿನಿಂದ ಪ್ರೇಯಸಿಯ ತಲೆ ಕಡಿದಿದ್ದಾನೆ. ನಂತರ ರುಂಡದೊಂದಿಗೆ ಖಾನಾಹೊಸಹಳ್ಳಿಯ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ರುಂಡದೊಂದಿಗೆ ಬಂದ ಬೋಜರಾಜನನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement