2014 ರಿಂದ ವಿಶೇಷ ದತ್ತು ಏಜೆನ್ಸಿಗಳಲ್ಲಿ 2000ಕ್ಕೂ ಹೆಚ್ಚು ಮಕ್ಕಳು ಸಾವು: ಸರ್ಕಾರ

ನವದೆಹಲಿ: 2014ರಿಂದ ವಿಶೇಷ ದತ್ತು ಸಂಸ್ಥೆಗಳಲ್ಲಿ 2,000 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು 2014 ರಿಂದ 27,085 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಅಂಕಿಅಂಶ ಹಂಚಿಕೊಂಡಿದ್ದಾರೆ.
ಅಂಕಿಅಂಶಗಳ ಪ್ರಕಾರ, 2014-15ರಲ್ಲಿ 287 ಮಕ್ಕಳು, 2015-16ರಲ್ಲಿ 289, 2016-17ರಲ್ಲಿ 281, 2017-18ರಲ್ಲಿ 321, 2018-19ರಲ್ಲಿ 253, 2018-19ರಲ್ಲಿ 287, 2019-2019ರಲ್ಲಿ 287, 2020-21ರಲ್ಲಿ 182 ಮತ್ತು 2021-22ರಲ್ಲಿ 132 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.

ಸ್ಮೃತಿ ಇರಾನಿ ಲಿಖಿತ ಹೇಳಿಕೆಯಲ್ಲಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಶಿಶುಪಾಲನಾ ಸಂಸ್ಥೆಗಳ (CCIs) ನೈಜ-ಸಮಯದ ಮೇಲ್ವಿಚಾರಣೆ ಮತ್ತು ಅವುಗಳ ತಪಾಸಣೆಗಾಗಿ ದೇಶದಾದ್ಯಂತ ಯಾಂತ್ರಿಕ ವ್ಯವಸ್ಥೆ MASI ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಜನವರಿ 21, 2021 ರಿಂದ ಪೋರ್ಟಲ್ ಪ್ರಾರಂಭವಾದಾಗಿನಿಂದ 88 ವಿಶೇಷ ದತ್ತು ಏಜೆನ್ಸಿಗಳನ್ನು (SAAs) ಸಂಬಂಧಿತ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳು JJ ಕಾಯಿದೆ, 2015 ರ ಅಡಿಯಲ್ಲಿ ಕಡ್ಡಾಯವಾಗಿ ಪರಿಶೀಲಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ... : ನಾನಾ ಪಾಟೇಕರ್ ಅಂತಿಮ ಕ್ಷಣಗಳು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement