ಹುಬ್ಬಳ್ಳಿ: ತಾರಿಹಾಳ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೂವರು ಸಾವು

ಹುಬ್ಬಳ್ಳಿ:  ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಸುಟ್ಟು ಗಾಯಗೊಂಡಿದ್ದವರಲ್ಲಿ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಲಘಟಗಿ ತಾಲೂಕು ಲಿಂಗನಕೊಪ್ಪ ಗ್ರಾಮದ ಮಾಳೇಶ ಹದನ್ನನವರ (25ವರ್ಷ),  ಹುಬ್ಬಳ್ಳಿ ತಾಲೂಕು ತಾರಿಹಾಳದ ವಿಜಯಲಕ್ಷ್ಮಿ ಯಚ್ಚಲಗಾರ (34 ವರ್ಷ), ಗೌರಮ್ಮ ವೀರಭದ್ರಯ್ಯ ಹಿರೇಮಠ (45 ವರ್ಷ) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರಲ್ಲಿ ವಿಜಯಲಕ್ಷ್ಮಿ ಯಚ್ಚಲಗಾರ ಶನಿವಾರ ತಡರಾತ್ರಿ ಮೃತಪಟ್ಟಿದ್ದರು.
ಗಾಯಗೊಂಡಿರುವ ನಿರ್ಮಲಾ ಹುಚ್ಚನವರ ತಾರಿಹಾಳದ ಚನ್ನಮ್ಮ ಅರಿವಾಳ, ಪ್ರೇಮಾ ಅರಿವಾಳ, ನನ್ನಿಮಾ ಎಂ. ಪಡದಾರ, ಮಲ್ಲಿಕಾ ರೆಹಾನ ಕೊಪ್ಪದ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ನಿಮ್ಮ ಕಾಮೆಂಟ್ ಬರೆಯಿರಿ

advertisement